Slide
Slide
Slide
previous arrow
next arrow

ಯೋಗಾಸನ ಶಿಬಿರ: ಶಿಕ್ಷಕಿ ಸೀಮಾ‌ ನಾಯ್ಕ್‌ಗೆ ಪ್ರಶಸ್ತಿ

300x250 AD

ಭಟ್ಕಳ: ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮಚ್ಚೇರಿಯ ಬೆಂಕಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಯೋಗಾಸನ ನಿರ್ಣಾಯಕರ ತರಬೇತಿಯ
ಶಿಬಿರದಲ್ಲಿ ಭಟ್ಕಳ ವಿಧ್ಯಾಭಾರತಿ ಆಂಗ್ಲ ಮಾಧ್ಯಮದ ದೈಹಿಕ ಶಿಕ್ಷಕಿಯಾದ ಸೀಮಾ ಈಶ್ವರ ನಾಯ್ಕ ಯೋಗಾಸನ ನಿರ್ಣಾಯಕ ಶಿಬಿರದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ರಾಜ್ಯದ 25 ಜಿಲ್ಲೆಯ 55 ನಿರ್ಣಾಯಕರು ಮತ್ತು 15 ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಭಾಗವಹಿಸಿದರು. ಉತ್ತರ ಕನ್ನಡ ಜಿಲ್ಲೆಯಿಂದ 8 ನಿರ್ಣಾಯಕರು ಶಿಬಿರದಲ್ಲಿ ಭಾಗವಹಿಸಿದರು. ಇದರಲ್ಲಿ ಭಟ್ಕಳ ತಾಲ್ಲೂಕಿನ ವಿಧ್ಯಾಭಾರತಿ ಆಂಗ್ಲ ಮಾಧ್ಯಮದ ದೈಹಿಕ ಶಿಕ್ಷಕಿಯಾದ ಸೀಮಾ ಈಶ್ವರ ನಾಯ್ಕ ಯೋಗಾಸನ ನಿರ್ಣಾಯಕ ಶಿಬಿರದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ರಾಜ್ಯ ಯೋಗಾಸನ ನಿರ್ಣಾಯಕ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ವಿದ್ಯಾಭಾರತಿ ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯರಾದ ರೂಪ ರಮೇಶ ಖಾರ್ವಿರವರು ಸೀಮಾ ಈಶ್ವರ ನಾಯ್ಕರಿಗೆ ಅಭಿನಂದಿಸಿದ್ದಾರೆ.

300x250 AD

ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಅಧ್ಯಕ್ಷ ಹಾಗೂ ಏಷ್ಯನ್ ಯೋಗ ಸಂಸ್ಥೆಯ ಕಾರ್ಯದರ್ಶಿ ಡಾಕ್ಟರ್ ನಿರಂಜನ್ ಮೂರ್ತಿ, ದೆಹಲಿ ಯೋಗಾಸನ ಭಾರತ ಸಂಸ್ಥೆಯ ಜ್ಯೋತಿ ಶರ್ಮ ಮತ್ತು ನಿವೇದಿತ ವೀಕ್ಷಕ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top