ಹೊನ್ನಾವರ : ತಾಲೂಕಾ ಕರ್ಕಿ ಗ್ರಾಮದ ಮೂಡಗಣಪತಿಯ ಗುಡ್ಡಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ರವಿವಾರ ಕೋಳಿ ಅಂಕ ನಡೆಸುತ್ತಿರುವ ಆರೋಪಿಗಳ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹೊನ್ನಾವರದ ರವಿ ಮೇಸ್ತಾ, ಅರುಣ ಭಂಡಾರಿ, ಮಾವಿನಕುರ್ವಾ ದೇವರಮೂಟೆ ಸುರೇಶ ನಾಯ್ಕ, ಕೊಳಗದ್ದೆ, ಖರ್ವಾ ವಿನಾಯಕ ರಾಮಾ ಗೌಡ, ವಿನೋದ ರಾಮಾ ಗೌಡ, ಕಾನಗೋಡ ರಾಮಾ ಗೌಡ, ಗುಣವಂತಯ ರಾಮ ಗೌಡ, ಚಂದ್ರಾಣಿಯ ನಾಗೇಶ ನಾಯ್ಕ, ಕುಳಕೋಡ ರವಿಚಂದ್ರ ಭಂಡಾರಿ, ಹಳಗೇರಿಯ ಗಿರೀಶ್ ಅಂಬಿಗ, ಕುದಬೈಲ್ ವಿಷ್ಣು ರಾಮ ನಾಯ್ಕ ಇವರು ತಮ್ಮ-ತಮ್ಮ ಅನ್ಯಾಯದ ಲಾಭಗೋಸ್ಕರ ಎರಡೂ ಕಡೆಗಳಿಂದ ಕೋಳಿ ಹುಂಜಗಳನ್ನು ಕಾದಾಟಕ್ಕೆ ಬಿಟ್ಟು. ಅವುಗಳ ಮೇಲೆ ಹಣವನ್ನು ಪಂಥ ಕಟ್ಟಿ ಕೋಳಿ ಅಂಕ ಜೂಜಾಟವನ್ನು ಆಡುತ್ತಿದ್ದಾಗ ಎರಡು ಕೋಳಿ ಹುಂಜಗಳನ್ನು ಸ್ಥಳದಲ್ಲಿಯೇ ಬಿಟ್ಟು ಸ್ಥಳದಿಂದ ಓಡಿ ಹೋಗಿದ್ದು ಹಾಗೂ ಆಪಾದಿತರಾದ ಕರ್ಕಿನಾಕಾ ಜನಾರ್ಧನ ಉಮೇಶ ನಾಯ್ಕ, ಜೋಗಣಿಕಟ್ಟೆ ದೇವಿದಾಸ ವೆಂಕಟಪತಿ ನಾಯ್ಕ, ಮಾವಿನಕುರ್ವಾದ ಮಂಜು ಗೌಡ, ಮಾವಿನಕುರ್ವಾದ ರಾಮ ಗೌಡ, ಅರೆಅಂಗಡಿಯ ನಾಗರಾಜ ದೇವಲಾಪುರ, ಮುಗ್ವದ ಕನ್ಯಾ ಚಂದ್ರು ಗೌಡ, ವಂದೂರು ಕೃಷ್ಣ ನಾಯ್ಕ, ಕರ್ಕಿಯ ನಾಗೇಶ ಮುಕ್ರಿ ಇವರು ಓಡಿ ಹೋಗಿದ್ದು ಹಾಗೂ ಇತರರು ತಮ್ಮ ತಮ್ಮ ಅನ್ಯಾಯದ ಲಾಭಗೋಸ್ಕರ ಕುಟಕುಟಿ ಜುಗಾರಾಟ ಆಡುತ್ತಿದ್ದಾಗ ನಗದು ಹಣ 2850/- ರೂ. ಹಾಗೂ ಕುಟಕುಟ ಜುಗಾರಾಟದ ಸಲಕರಣೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅವರುಗಳ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.