Slide
Slide
Slide
previous arrow
next arrow

ಸ್ವರ್ಣವಲ್ಲೀಯಲ್ಲಿ ರುದ್ರಹವನ ಸಂಪನ್ನ

300x250 AD

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಬೆಳಿಗ್ಗೆ ಯಾಗಶಾಲೆಯಲ್ಲಿ ರುದ್ರಹವನ ನಡೆಯಿತು. ಶ್ರೀ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ಪೂರ್ಣಾಹುತಿಯು ನೆರವೇರಿತು. ಕ್ರಿ.ಶ.ನಾಲ್ಕನೇ ಶತಮಾನಕ್ಕೂ ಮೊದಲೇ ಸೋಂದಾ ಕ್ಷೇತ್ರದಲ್ಲಿ ಸರ್ವಸಂಗಪರಿತ್ಯಾಗಿಗಳು ತಮ್ಮ‌ ಯೌಗಿಕ ಸಿದ್ಧಿಗಾಗಿ ಈ ಕ್ಷೇತ್ರದಲ್ಲಿನ ಶಾಲ್ಮಲಾ ನದಿಯ ಪ್ರಶಾಂತ ಪರಿಸರವನ್ನೇ ಆಯ್ಕೆಮಾಡಿಕೊಂಡಿದ್ದರು.ಶಾಲ್ಮಲೆ ಇಲ್ಲಿ ತನ್ನ ಹರಿವಿಗೆ ರೌದ್ರತೆಯ ಲಕ್ಷಣವನ್ನು ನೀಡದೆ ಶಾಂತತೆಯ ಸ್ವರೂಪವನ್ನು ನೀಡಿ ನಿರ್ಮಲ ಸ್ವರೂಪಿಣಿಯಾಗಿ ಯೋಗಿಗಳಿಗೆ ತಮ್ಮ ತಪಸ್ಸಿಗೆ,ಧಾರ್ಮಿಕ ಆಚರಣೆಗೆ ಅನುಕೂಲವಾಗುವ ತೀರ್ಥಸ್ವರೂಪಿಣಿಯಾಗಿಯೂ ಶತಶತಮಾನಗಳಿಂದ ಹರಿಯುತ್ತಿದ್ದಾಳೆ.ಇಂತಹ ಪಾವನವಾಹಿನಿಯ ದಂಡೆಯ ಮೇಲಿನ ಪುಣ್ಯ ಸ್ಥಳವೇ ಸೋಂದಾದ “ಭೀಮನ ಪಾದ”.

ಐತಿಹಾಸಿಕ ಸ್ಥಳವಾದ ಭೀಮನಪಾದದಲ್ಲಿ ಉಭಯ ಶ್ರೀ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಅಲ್ಲಿರುವ ಶಿವಲಿಂಗಗಳಿಗೆ ವಿಶೇಷ ಪೂಜೆ ಹಾಗೂ ಸತ್ಯನಾರಾಯಣ ವ್ರತವನ್ನು ಆಚರಿಸಲಾಯಿತು. ರಾತ್ರಿ ಶ್ರೀ ಮಠದ ಆರಾಧ್ಯ ದೇವರುಗಳಾದ ಗಂಗಾವಿಶ್ವೇಶ್ವರ ಮತ್ತು ಚಂದ್ರಮೌಳೀಶ್ವರನಲ್ಲಿ ಶತರುದ್ರ ಅನುಷ್ಠಾನವು ಯತಿದ್ವಯರ ಸಮ್ಮುಖದಲ್ಲಿ ನೆರವೇರಿತು.

300x250 AD
Share This
300x250 AD
300x250 AD
300x250 AD
Back to top