ಸಿದ್ದಾಪುರ: ತಾಲೂಕಿನ ಹಂಗಾರಖಂಡದ ಶ್ರೀ ಚೌಡೇಶ್ವರಿ, ನಾಗ ಮತ್ತು ಪರಿವಾರ ದೇವತೆಗಳ 7ನೇ ವರ್ಧಂತಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾ.1, ಶುಕ್ರವಾರದಂದು ನಡೆಯಲಿವೆ. ಅಂದು ಬೆಳಿಗ್ಗೆ 9ಗಂಟೆಯಿಂದ ಶ್ರೀ ದೇವರಿಗೆ ವಿವಿಧ ಪೂಜೆಗಳು, ಧಾರ್ಮಿಕ ಕೈಂಕರ್ಯಗಳು, ಪೂಜಾ ವಿಧಿ ವಿಧಾನಗಳು, ಮಧ್ಯಾಹ್ನ ಮಹಾಮಂಗಳಾರತಿ. ತೀರ್ಥಪ್ರಸಾದ ವಿತರಣೆ, ವಿಪ್ರಾಶೀರ್ವಾದ ನಂತರ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ಸಭಾ ಕಾರ್ಯಕ್ರಮ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದ್ದು, ನಾಗಚೌಡೇಶ್ವರಿ ಸೇವಾ ಸಮಿತಿ ಅಧ್ಯಕ್ಷ ರಮೇಶ ಎನ್. ನಾಯ್ಕ ಬಾಳೇಕೈ ಅಧ್ಯಕ್ಷತೆ ವಹಿಸಲಿದ್ದು, ವೇ.ಮೂ.ವಿನಾಯಕ್ ಭಟ್ ಮತ್ತಿಹಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ, ನಾಣಿಕಟ್ಟಾ ಇದರ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತಿಹಳ್ಳಿ, ತ್ಯಾಗಲಿ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಯಶೋಧಾ ದತ್ತಾತ್ರೇಯ ನಾಯ್ಕ್, ಸದಸ್ಯ ಗಣಪತಿ ಹೆಗಡೆ, ನಾಗಚೌಡೇಶ್ವರಿ ಸೇವಾ ಸಮಿತಿ ಕಾರ್ಯದರ್ಶಿ ಎ.ಜಿ.ನಾಯ್ಕ್ ಉಪಸ್ಥಿತರಿರಲಿದ್ದಾರೆ. ಈ ವೇಳೆ ನಿವೃತ್ತ ಮುಖ್ಯಾಧ್ಯಾಪಕ ಗಣಪತಿ ವಿ. ಹೆಗಡೆ, ಹಂಗಾರಖಂಡ, ನಿವೃತ್ತ ಯೋಧ ಗುರುಮೂರ್ತಿ ಆರ್. ನಾಯ್ಕ, ಗವಿನಗುಡ್ಡ ಇವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಚಿಕ್ಕ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಹಾಗೂ ರಾತ್ರಿ 9.30 ರಿಂದ ಸಿಗಂದೂರು ಚೌಡಮ್ಮ ದೇವಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಸಿಗಂದೂರು ಇವರಿಂದ ಮಾಗಧವಧೆ, ಚಕ್ರವ್ಯೂಹ, ಮೀನಾಕ್ಷಿ ಕಲ್ಯಾಣ ಅದ್ದೂರಿ ಯಕ್ಷಗಾನ ಪ್ರದರ್ಶನ ನಡೆಯಲಿದ್ದು ಭಕ್ತಾದಿಗಳು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ಕೋರಿದ್ದಾರೆ.