ಭಟ್ಕಳ: ಬೆಣಂದೂರು ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟಾಟಾ ಏಸ್ ವಾಹನ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಆಟೋದಲ್ಲಿದ್ದ ನಾಲ್ವರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಬೆಳಕೆ ಜನತಾ ಕಾಲೋನಿ ನಿವಾಸಿ ಮಂಜಮ್ಮ ಮಾಸ್ತಿ ಮೊಗೇರ(40) ಹಾಗೂ ಬೆಳಕೆ ಗರಡಿಹಿತ್ತು ನಿವಾಸಿ ವೆಂಕಟ್ರಮಣ ಸುಬ್ಬಯ್ಯ ನಾಯ್ಕ(52) ಎಂದು ಗುರುತಿಸಲಾಗಿದ್ದು ಆಟೋ ಚಾಲಕ ಪಾಂಡು ನಾಯ್ಕ ಹಾಗೂ ಮಂಜುನಾಥ ವೆಂಕಟೇಶ ಭಂಡಾರಿ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯನದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆರೋಪಿ ಟಾಟಾ ಎಸ್ ವಾಹನ ಚಾಲಕ ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು ಗೋಳಿಮರ ಕ್ರಾಸ್ ಕಡೆಯಿಂದ ಭಟ್ಕಳಕ್ಕೆ ಕಡೆಗೆ ಬರುತ್ತಿದ್ದ ಆಟೋ ರಿಕ್ಷ ಬೆಣಂದೂರು ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿದ್ದಂತೆ ಟಾಟಾ ಏಸ್ ವಾಹನ ಚಾಲಕ ತನ್ನ ನಿಯಂತ್ರಣ ತಪ್ಪಿ ಹೆದ್ದಾರಿ ರಸ್ತೆಯ ನಡುವೆ ಇರುವ ಡಿವೈಡರ್ ದಾಟಿ ಬಂದು ಪ್ರಯಾಣಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಸ್ಥಳದಲ್ಲೇ ಪಲ್ಟಿಯಾದ ಪರಿಣಾಮ ರಿಕ್ಷಾದಲ್ಲಿದ್ದ ಮಂಜಮ್ಮಾ ಮಾಸ್ತಿ ಮೊಗೇರ ಹಾಗೂ ವೆಂಕಟ್ರಮಣ ಸುಬ್ಬಯ್ಯ ನಾಯ್ಕ ಅವರ ತಲೆ ಹಾಗೂ ಕೈಗೆ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದು
ಆಟೋ ಚಾಲಕ ಹಾಗೂ ಇನ್ನೋರ್ವ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದು ಟಾಟಾ ಎಸ್ ವಾಹನ ಚಾಲಕನ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.