Slide
Slide
Slide
previous arrow
next arrow

ಜೋಯಿಡಾದಲ್ಲಿ ಅಧಿಕಾರಿಗಳ ಬೆವರಿಳಿಸಿದ ಶಾಸಕ ಆರ್.ವಿ. ದೇಶಪಾಂಡೆ

300x250 AD

ಜೋಯಿಡಾ: ಜೋಯಿಡಾ ತಾಲೂಕಿನ ಆಸ್ಪತ್ರೆಯಲ್ಲಿ ಡಾಕ್ಟರ್ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ,ಕೆಲಸ ಮಾಡಿದ್ದರೆ ಇಲ್ಲಿ ರೋಗಿಗಳು ಬರುತ್ತಿದ್ದರು, ಎಲ್ಲಾ ರೋಗಿಗಳು ಹೊರ ಜಿಲ್ಲೆಗೆ ಹೊರ ತಾಲೂಕಿಗೆ ಹೋಗುತ್ತಾರೆ ಇಲ್ಲಿ ಉತ್ತಮ ಚಿಕಿತ್ಸೆ ದೊರೆತರೆ ಬೇರೆಡೆಗೆ ಏಕೆ ಚಿಕಿತ್ಸೆಗೆ ಹೋಗುತ್ತಾರೆ, ಒಂದು ವರ್ಷಕ್ಕೆ ಕೇವಲ 80 ಹೆರಿಗೆ ಇಲ್ಲಿ ಆಗುತ್ತಿದೆ ಎಂದರೇ ನಂಬಲು ಸಾಧ್ಯವಾಗುತ್ತಿಲ್ಲ, ತಾಲೂಕಿನ ಜನರು ಬೇರೆಡೆಗೆ ಚಿಕಿತ್ಸೆ ಪಡೆಯಲು ಇಲ್ಲಿಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಜೋಯಿಡಾ ಶಾಸಕ ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.

ಅವರು ಜೋಯಿಡಾ ತಾಲೂಕಾ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡುತ್ತಾ ಜೋಯಿಡಾ ತಾಲೂಕಿನಲ್ಲಿ ಉತ್ತಮ ಆಸ್ಪತ್ರೆಯ ಕಟ್ಟಡಗಳಿವೆ, ಆದರೆ ಇಲ್ಲಿ ವೈದ್ಯರು ಕೆಲಸ ಮಾಡಲು ಆಸಕ್ತಿ ತೋರಿದಂತೆ ಕಾಣುತ್ತಿಲ್ಲ, ಆಸ್ಪತ್ರೆ ದೇವಸ್ಥಾನ ಇದ್ದಂತೆ ನಿಮ್ಮ ನಡುವಳಿಕೆ ರೋಗಿಗಳ ಜೊತೆ ಉತ್ತಮವಾಗಿರಲಿ ಎಂದು ಆಸ್ಪತ್ರೆ ಬಗ್ಗೆ ಮಾಹಿತಿ ಕೇಳಿದರು ಹಿರಿಯ ವೈದ್ಯರು ಮತ್ತು ಕಿರಿಯ ವೈದ್ಯರ ಲೆಕ್ಕಾಚಾರಕ್ಕೆ ಒಂದಕ್ಕೊಂದು ಹೊಂದಾಣಿಕೆಯೇ ಇರಲಿಲ್ಲ, ಲಕ್ಷಾಂತರ ಹಣ ಖರ್ಚು ಆಗಿದೆ ಆದರೆ ನಿಮ್ಮ ಬಳಿ ಖರ್ಚಾದ ಹಣದ ಬಗ್ಗೆ ಮಾಹಿತಿ ಸರಿಯಾಗಿ ಇಲ್ಲ ಎಂದು ದೇಶಪಾಂಡೆ ಹೇಳಿದರು, ಇಲ್ಲಿ ಕೆಲಸ ಮಾಡುತ್ತಾ ಹೊರಗಡೆ ಬೇರೆಡೆಗೆ ನಿಮ್ಮ ವೈಯಕ್ತಿಕ ಕ್ಲಿನಿಕ್ ಕ‌ಂಡು ಬಂದಲ್ಲಿ ಅಂತವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು, ಆಸ್ಪತ್ರೆಗೆ ಸರಿಯಾಗಿ ವೈದ್ಯರು ಹಾಜರಾಗಿ ಜನರ ಸೇವೆ ಮಾಡಿ ವೈದ್ಯರಾಗಲು ಪೂರ್ವ ಜನ್ಮದ ಪುಣ್ಯ ಬೇಕು ಎಂದರು‌. ಅಂಬ್ಯುಲೆನ್ಸ ಹಾಗೂ ತಾಲೂಕಿನ ಎಲ್ಲಾ ಆಸ್ಪತ್ರೆಗಳಿಗಳ ಕೊರತೆಗಳನ್ನು ನಿಗಿಸುವಂತೆ ಸಭೆಯಲ್ಲಿ ದೇಶಪಾಂಡೆ ತಿಳಿಸಿದರು.

300x250 AD

ಡಾ.ವಿಜಯಕುಮಾರ್ ಮಾತನಾಡಿ ಹೊಸ ಎಕ್ಸ ರೇ ಮಶಿನ್ ಹಾಗೂ ಪೊಸ್ಟ್ ಮಾಟಮ್ ಹೊಸ ರೂಮ್ ಮತ್ತು ಇನ್ನೀತರ ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಜೋಯಿಡಾ ತಹಶಿಲ್ದಾರರ ಮಂಜುನಾಥ ಮುನ್ನೋಳಿ, ಇಓ ಆನಂದ ಬಡಕುಂದ್ರಿ, ಡಾ. ವಿಜಯಕುಮಾರ್, ಡಾ.ಸುಜಾತಾ ಉಕ್ಕಲಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.

Share This
300x250 AD
300x250 AD
300x250 AD
Back to top