ಶಿರಸಿ; ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘ ಹಾಗೂ ಕರ್ನಾಟಕ ರಾಜ್ಯ ಚದುರಂಗ ಸಂಘದಿಂದ ಇತ್ತೀಚಿಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ನಗರದ ಕಡವೆ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. ಪಂದ್ಯಾವಳಿಯು ಒಟ್ಟೂ ರೂ. 76,000/- ನಗದು ಹಾಗೂ 31 ಟ್ರೋಫಿಗಳನ್ನೊಳಗೊಂಡಿತ್ತು. ಪಂದ್ಯಾವಳಿಯಲ್ಲಿ ಒಟ್ಟೂ 75 ಆಟಗಾರರು ಭಾಗವಹಿಸಿದ್ದರು. ಮುಖ್ಯ ತೀರ್ಪುಗಾರ ಕೆ. ವಿ. ಶ್ರೀಪಾದ (ಎಫ್ ಎ, ಎಫ್ ಆಯ್) ವಿಜೇತರ ಪಟ್ಟಿಯನ್ನು ಪ್ರಕಟಿಸಿದರು.
ಪ್ರಥಮ ಸ್ಥಾನವನ್ನು ಅಗಸ್ಟಿನ್ ಎ. ರೂ. 12,500/- ನಗದು ಮತ್ತು ಟ್ರೋಫಿ, ದ್ವಿತೀಯ ಮಹೇಶ ಬೆಂಕಟವಳ್ಳಿ. ಎಮ್. ರೂ. 10,000/- ಮತ್ತು ಟ್ರೋಫಿ, ತೃತೀಯ ಪ್ರಶಾಂತ ಜೆ. ನಾಯಕ್ ರೂ. 7,500/- ಮತ್ತು ಟ್ರೋಫಿಗಳನ್ನು ಹಂಚಿಕೊಂಡರು. ನಾಲ್ಕರಿಂದ 20 ನೇಯ ಸ್ಥಾನವನ್ನು ವಿನಯಕುಮಾರ್ ಎಸ್. ಹಿರೇಮಠ, ಸಮರ್ಥ ಜೆ. ರಾವ್, ಪ್ರಜ್ವಲ್ ಹರ್ತಿ, ವಧನ್ ಎಮ್. ಹೆಗಡೆ, ವಿರಾಜ್ ಪ್ರಭಾಕರ್ ಶೆಟ್ಟಿ, ಗೌತಮ ಜೆ. ಕೆ. ವಿಶ್ವೇಶ್ವರಯ್ಯ ಗುರುಮಠ, ಅರುಣ್ ಕುಮಾರ್, ಸಿಮ್ರಾ ನಡಫ್, ಪ್ರಣಾವ್ ಹೆಗಡೆ, ಕೃಷ್ಣಮೂರ್ತಿ ಸುಧಾಕರ ಪಟಗಾರ, ಅಮರನಾಥ ಹೆಗಡೆ, ಶೌರ್ಯ ಎನ್. ಪ್ರಭು, ಶಿವರಾಜಕುಮಾರ ಎ, ನವೀನ ಎಸ್. ಹೆಗಡೆ, ಮಿಹಿರ ಹೆಗಡೆ ರೂ. 35,500/- ದೊಂದಿಗೆ ಕ್ರಮವಾಗಿ ಹಂಚಿಕೊಂಡರು. ಉತ್ತಮ ಮಹಿಳಾ ಆಟಗಾರ್ತಿ ಪ್ರಥಮ ಸ್ಥಾನವನ್ನು ಅಂಬಿಕಾ ಮಸ್ಸಗಿ ರೂ. 1,000/- ಮತ್ತು ಟ್ರೋಫಿ, ದ್ವಿತೀಯ ಭೂಮಿಕಾ ಪ್ರದೀಪ್ ಹೆಗಡೆ ರೂ. 500/- ಮತ್ತು ಟ್ರೋಫಿಯೊಂದಿಗೆ ಹಂಚಿಕೊಂಡರು. ಉತ್ತಮ ಹಿರಿಯ ಆಟಗಾರ ಪ್ರಶಸ್ತಿ (45 ವರ್ಷ ಮೇಲ್ಪಟ್ಟ ವಿಭಾಗ) ಪ್ರಥಮ ಕೃಷ್ಣ ವಿ. ಶಿಂಧೆ ರೂ. 1,000/- ಮತ್ತು ಟ್ರೋಫಿ, ದ್ವಿತೀಯ ನರೇಂದ್ರ ಅಗ್ರಸಾನಿ ರೂ. 500/- ಮತ್ತು ಟ್ರೋಫಿ, (50 ವರ್ಷ ಮೇಲ್ಪಟ್ಟ ವಿಭಾಗ) ಪ್ರಥಮ ಮದನ ನಾಗೇಶ ತಾಲೇಕರ್ ರೂ. 1,000/- ಮತ್ತು ಮತ್ತು ಟ್ರೋಫಿ, (60 ವರ್ಷ ಮೇಲ್ಪಟ್ಟ ವಿಭಾಗ) ಪ್ರಥಮ ವಿಜಯ್ ಕುಮಾರ್ ಸಿ. ಹಲ್ಲುರ್ ರೂ. 1,000/- ಮತ್ತು ದ್ವಿತೀಯ ಜೈವಂತ ಹೆಗಡೆ ರೂ. 500/- ಮತ್ತು ಟ್ರೋಫಿಗಳನ್ನು ಪಡೆದುಕೊಂಡರು.
8 ವರ್ಷದೊಳಗಿನವರ ವಿಭಾಗದಲ್ಲಿ ಅನಿಷ್ ಎಸ್. ಶೆಟ್ಟಿ ಪ್ರಥಮ ಮತ್ತು 10 ವರ್ಷದೊಳಗಿನ ವಿಭಾಗದಲ್ಲಿ ಫಲ್ದೆಸೈ ಮಾನವ್ (ಪ್ರಥಮ), ದೀಪಿಕಾ ಪ್ರದೀಫ ಹೆಗಡೆ (ದ್ವಿತೀಯ), ಮಿಶಿಕಾ ಸಿಂಘಾನಿಯ (ತೃತೀಯ) ಸ್ಥಾನವನ್ನು ಕ್ರಮವಾಗಿ ಹಂಚಿಕೊಂಡರು. 12 ವರ್ಷದೊಳಗಿನ ವಿಭಾಗದಲ್ಲಿ ಶುಭನ್ ಬಂದೋಡ್ಕರ್ (ಪ್ರಥಮ), ನೇಸರ ಜಿ. ಹೆಗಡೆ (ದ್ವಿತೀಯ), ನಿಶಾಂತ ವಿನಯ ಹೆಗಡೆ (ತೃತೀಯ) ಸ್ಥಾನಗಳನ್ನು ಹಾಗು 14 ವರ್ಷ ದೊಳಗಿನವರ ವಿಭಾಗದಲ್ಲಿ ತ್ರಿಮುಖ್ ವಿ. ಎಚ್. (ಪ್ರಥಮ), ಪ್ರಣಾವ್ ಉದಯ ನಾಯ್ಕ (ದ್ವಿತೀಯ), ವಿಹಾನ್ ವೀರನ್ ರೇವಣಕರ್ (ತೃತೀಯ) ಸ್ಥಾನಗಳನ್ನು ಕ್ರಮವಾಗಿ ಪಡೆದರು.
16 ವರ್ಷದೊಳಗಿನ ವಿಭಾಗದಲ್ಲಿ ಕೃಷ್ಣ ಎಮ್. ಬಾಪಟ್ (ಪ್ರಥಮ), ಪರಾಶರ ಕೆ. (ದ್ವಿತೀಯ), ಶುಭಂ ಪಿ. ಶೇಟ್ (ತೃತೀಯ) ಸ್ಥಾನಗಳನ್ನು ಕ್ರಮವಾಗಿ ಹಂಚಿಕೊಂಡರು. ಮುಖ್ಯ ಅತಿಥಿಯಾಗಿ ಎಂ. ಪಿ. ಹೆಗಡೆ ಬೊಪ್ಪನಳ್ಳಿ ಹಾಗೂ ಟಿ. ಎಸ್. ಎಸ್. ನಿರ್ದೇಶಕರಾಗಿ ಶ್ರೀಮತಿ ವಸುಮತಿ ಭಟ್ ಪ್ರಶಸ್ತಿಗಳನ್ನು ವಿತರಿಸಿದರು. ನವೀನ ಶ್ರೀ. ಹೆಗಡೆ ಪಂದ್ಯಾವಳಿಗೆ ಆಯೋಜಕರಾಗಿ ಕಾರ್ಯ ನಿರ್ವಹಿಸಿದರು.