ಹೊನ್ನಾವರ: ಉಪ್ಪಿನಹೊಯ್ಗೆ ಶ್ರೀ ನಾರಾಯಣದೇವ ನಾಜಗಾರ ಕೆಳಗನೂರು ದೇವಸ್ಥಾನವು ಸುಮಾರು ಅಂದಾಜಿನ ಪ್ರಕಾರ 500 ರಿಂದ 600 ವರ್ಷಗಳ ಪುರಾತನ ಜಾತ್ರೆ ನಡೆಯುವಂತ ಒಂದು ವಿಶೇಷ ದೇವಸ್ಥಾನವಾಗಿದ್ದು, ಕಾಲಕ್ರಮೇಣ ಈ ದೇವಸ್ಥಾನಕ್ಕೆ ಹೋಗಲು ಯಾವುದೇ ಸರಿಯಾದ ದಾರಿ ಇಲ್ಲದ ಕಾರಣ ಹಳೆಯ ಹಿಂದಿನ ವೈಭವಗಳು ಕಳೆಗುಂದಿದ್ದವು. ಈ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಗ್ರಾಮಸ್ಥರು ಮತ್ತು ಭಕ್ತರು ನಿರಂತರ ಪ್ರಯತ್ನ ಮಾಡುತ್ತಿದ್ದು ಇವಾಗ ನಿರಂತರ ಪ್ರಯತ್ನದ ಫಲವಾಗಿ ಸ್ಥಳೀಯ ಜಾಗದವರು ದೇವಸ್ಥಾನಕ್ಕೆ ದಾರಿ ನೀಡಲು ಮುಂದಾಗಿದ್ದು, ಸ್ಥಳೀಯ ಜಾಗದವರ ಒಪ್ಪಿಗೆಯ ಮೇರೆಗೆ ನಾಜಗಾರದ ಗ್ರಾಮಸ್ಥರು ಶ್ರಮದಾನದ ಮೂಲಕ ಮೂಲಕ ದೇವಸ್ಥಾನಕ್ಕೆ ರಸ್ತೆಯನ್ನು ನಿರ್ಮಿಸಿ ಹಲವು ವರ್ಷಗಳ ರಸ್ತೆಯ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಭಕ್ತಾದಿಗಳ ಹೆಚ್ಚಿನ ಸಹಕಾರದಿಂದ ಹಳೆಯ ಜಾತ್ರಾ ಮಹೋತ್ಸವದಂತೆ ವೈಭವಗಳು ಮರುಕಳಿಸಲಿ ಎನ್ನುವುದು ಎಲ್ಲ ಭಕ್ತವೃಂದದ ಆಶಯವಾಗಿದೆ.