ಜೋಯಿಡಾ: ತಾಲ್ಲೂಕಿನ ಅವುರ್ಲಿಯಲ್ಲಿ ಸ್ಥಳೀಯ ಶ್ರೀ ಸೋಮೇಶ್ವರ ಯುವ ಒಕ್ಕೂಟ ಹಾಗೂ ಊರ ನಾಗರೀಕರ ಸಂಯುಕ್ತ ಆಶ್ರಯದಡಿ ಆಯೋಜಿಸಲಾಗಿದ್ದ ಆಹ್ವಾನಿತ ತಂಡಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಂದಿಗದ್ದೆ ಗ್ರಾಮ ಪಂಚಾಯತಿ ಸದಸ್ಯರಾದ ಧವಳೋ ಸಾವರ್ಕರ್, ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳು ಕ್ರೀಡಾ ಮನೋಭಾವನೆಯಿಂದ ಆಟವಾಡಿದ್ದಾರೆ. ಸತತ ಮೂರು ದಿನಗಳ ಕಾಲ ಆಟಗಾರರಿಗೆ, ಕ್ರೀಡಾಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಸಂಘಟಕರ ಸಂಘಟಿತ ಪ್ರಯತ್ನದಿಂದ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ದೀಪಕ್ ಬಾಂದೇಕರ, ಸಪ್ನೇಶ್ ಶೇಟ್, ಸಂಜಯ್ ದೇಸಾಯಿ, ಶೇಖರ ಪಾಡ್ಕರ್, ರವಿ, ರಾಘವೇಂದ್ರ ನಾಯ್ಕ,ಶೋಭಾ, ದತ್ತಾ ದೇಸಾಯಿ ಉಪಸ್ಥಿತರಿದ್ದರು.
ಬಾಪೇಲಿ ತಂಡವು ಪ್ರಥಮ ಬಹುಮಾನ ಗೆದ್ದರೆ, ಕಿರವತ್ತಿ ತಂಡವು ದ್ವಿತೀಯ ಮತ್ತು ಅವುರ್ಲಿ ತಂಡವು ತೃತೀಯ ಭುಮಾನವನ್ನು ತನ್ನದಾಗಿಸಿಕೊಂಡಿತು. ಸಂಘಟಕರಾದ ಅನಿಲ ಶೇಟಕರ ಸ್ವಾಗತಿಸಿದರೆ, ದಿಲೀಪ ದೇವದಾಸ ನಿರೂಪಿಸಿ, ವಂದಿಸಿದರು.