ಶಿರಸಿ: ತಾಲೂಕಿನ ಬಿಸಲಕೊಪ್ಪದಲ್ಲಿ ಸೂರ್ಯನಾರಾಯಣ ಪ್ರೌಢಶಾಲೆ 75 ನೇ ಗಣರಾಜ್ಯೋತ್ಸವದೊಂದಿಗೆ ವಾರ್ಷಿಕ ಸ್ನೇಹ ಸಮ್ಮೇಳನ, ಸನ್ಮಾನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷರಾದ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಮಕ್ಕಳ ಹಸ್ತಪ್ರತಿ ‘ರವಿ ರಶ್ಮಿ’ಯನ್ನು ಬಿಡುಗಡೆಗೊಳಿಸಿ ಸೂರ್ಯನಾರಾಯಣ ಪ್ರೌಢಶಾಲೆ ಕಳೆದ 53 ವರ್ಷಗಳಿಂದ ಈ ಭಾಗದ ಜನರಿಗೆ ಅಕ್ಷರ ಸಂಸ್ಕಾರ ನೀಡುತ್ತಿರುವ ದೇಗುಲವಾಗಿದೆ. ಅಲ್ಲದೆ ಈ ರವಿರಶ್ಮಿ ಹಸ್ತಪ್ರತಿ ಎನ್ನುವುದು ಮಕ್ಕಳ ಜ್ಞಾನ ವೃದ್ದಿಗೆ ಪೂರಕ ಎಂದು ಹೇಳಿದರು. ಪ್ರಥಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕಿರಣ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಈ ಶಾಲೆಯ ಹಳೆಯ ವಿದ್ಯಾರ್ಥಿಯಾದ ನನಗೆ ಈ ಶಾಲೆಗೆ ಸಹಕರಿಸುವ ಸಂದರ್ಭ ಒದಗಿದಲಿ ಖಂಡಿತ ಜೊತೆಗಿರುತ್ತೇನೆ ಎಂಬ ಮಾತುಗಳನ್ನಾಡಿ ಶುಭ ಕೋರಿದರು. ಶಾಲೆಯ ಹಳೆಯ ವಿದ್ಯಾರ್ಥಿಯಾದ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಹಾಗೂ ಲೆಕ್ಕ ಪರಿಶೋಧಕರಾದ ತಿಮ್ಮಯ್ಯ ಹೆಗಡೆ ಉಲ್ಲಾಳ ಸನ್ಮಾನ ಸ್ವೀಕರಿಸಿ, ಕಲಿತ ಶಾಲೆಯಲ್ಲಿ ಊರಿನ ಹಿರಿಯರ ಸಮ್ಮುಖದಲ್ಲಿ ,ತಂದೆ ತಾಯಿಗಳ ಎದುರಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ಅತ್ಯಂತ ಭಾವೋದ್ವೇಗದ ಕ್ಷಣ ಎಂದು ನೋಡಿದರು. ಸೂರ್ಯ ನಾರಾಯಣ ಪ್ರೌಢ ಶಾಲೆ ನನಗೆ ಅಕ್ಷರ ಜ್ಞಾನ ನೀಡಿ ಈ ಮಟ್ಟಕ್ಕೆ ಬೆಳೆಸಿದೆ ಅಲ್ಲದೆ ಪ್ರಸ್ತುತ ಸಂದರ್ಭದಲ್ಲಿ ಉತ್ತಮ ಸಂಸ್ಕಾರದ ಜೊತೆಗೆ ಶಿಕ್ಷಣ ನೀಡುತ್ತಾ ಇತರರಿಗೆ ಸ್ಪರ್ಧೆ ಒಡ್ಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಈ ಶಾಲೆಯ ಅಭಿವೃದ್ಧಿಗೆ ನಾನು ಸದಾ ಇರುತ್ತೇನೆ ಈ ಭಾಗದಲ್ಲಿ ಸ್ಪರ್ಧಾತ್ಮಕ ಶಿಕ್ಷಣ ತರಬೇತಿ ಕಾರ್ಯಕ್ರಮ ಆಗಬೇಕು ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡೋಣ ಎಂಬ ಕರೆ ನೀಡಿದರು.
ಮತ್ತೋರ್ವ ಅತಿಥಿಗಳಾಗಿದ್ದ ಸುಬ್ರಾಯ ನಾಗಪತಿ ಹೆಗಡೆ ದೊಡ್ಡನಳ್ಳಿ ಮಾತನಾಡುತ್ತ ಹಲವು ವರ್ಷಗಳಿಂದ ಉತ್ತಮ ಶಿಕ್ಷಣಕ್ಕೆ ಹೆಸರಾದ ಈ ಶಾಲೆ ಮುಂದೆಯೂ ತನ್ನ ಸಾಧನೆಯಿಂದ ಬೆಳಗಲಿ ಎಂದು ಆಶಿಸಿದ ಅಲ್ಲದೆ ಶಿಕ್ಷಣದ ಜೊತೆ ಸಂಸ್ಕಾರ ನೀಡುತ್ತಿರುವ ಶಾಲೆಯನ್ನು ಅಭಿನಂದಿಸಿದರು ಪ್ರಸ್ತುತ ಮುಖ್ಯೋಪಾಧ್ಯಾಯರಾದ ಗಣೇಶ ಭಟ್ ಹಾಗೂ ಶಿಕ್ಷಕ ವೃಂದದವರನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಎಸ್ ಎಂ ಹೆಗಡೆ ಹಾಗೂ ಆಡಳಿತ ಮಂಡಳಿ ಸದಸ್ಯರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ. ಹೆಗಡೆ ಹುಡೇಲಕೊಪ್ಪ ವಹಿಸಿ ಉತ್ತಮ ಶಿಕ್ಷಣ, ಮೂಲಭೂತ ಸೌಲಭ್ಯ, ಸಂಸ್ಕಾರ ಇದು ನಮ್ಮ ಶಾಲೆಯ ಆದ್ಯತೆ .ಈ ನಿಟ್ಟಿನಲ್ಲಿ ಗ್ರಾಮೀಣ ಶಾಲೆಯಾಗಿ ನಾವು ಪ್ರಗತಿ ಪಥದಲ್ಲಿದ್ದೇವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷರಾದ ಪ್ರಭಾಕರ್ ಹೆಗಡೆ ಹುಗ್ಗಿಕೊಪ್ಪ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಧರ ನಾಯಕ ಎಕ್ಕಂಬಿ ಉಪಸ್ಥಿತರಿದ್ದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ವಿಷಯವಾರು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಗಣೇಶ ಭಟ್ ವಾನಳ್ಳಿ ಸರ್ವರನ್ನು ಸ್ವಾಗತಿಸಿ, ಶಾಲೆಯ ವಾರ್ಷಿಕ ವರದಿ ವಾಚನ ನಡೆಸಿದರು ಅಲ್ಲದೆ ಶಾಲೆಗೆ ಸಹಕರಿಸಿದ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಒಂದು ಹೊಸ ಕಾರ್ಯಕ್ರಮ ನಡೆಸಬೇಕೆಂದಿದ್ದೇವೆ ಎಂದರು. ಲೋಕನಾಥ್ ಹರಿಕಂತ್ರ ವಂದಿಸಿದರೆ, ಬಿ ಎಮ್ ಭಜಂತ್ರಿ ಮತ್ತು ಸವಿತಾ ಭಟ್ ನಿರ್ವಹಿಸಿದರು ಮಧ್ಯಾಹ್ನ 2 ಗಂಟೆಗೆ ವಿದ್ಯಾರ್ಥಿಗಳಿಂದ ಲಘು ಮನರಂಜನಾ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಕಾರ್ಯಕ್ರಮಕ್ಕೆ ಸಭಾಂಗಣ ಕಿಕ್ಕಿರಿದು ತುಂಬಿದ್ದು ವಿಶೇಷವಾಗಿತ್ತು.