ಕಾರವಾರ: ನಗರದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜ.22ರಂದು ಅಯೋದ್ಯೆಯ ರಾಮಮಂದಿರ ಲೋಕಾರ್ಪಣೆ ನಿಮಿತ್ತ ದೇವಾಲಯದಲ್ಲಿ ದೀಪೋತ್ಸವ, ಹೋಮ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಡಾ. ಗಜೇಂದ್ರ ನಾಯ್ಕ ಹೇಳಿದರು. ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ವೇದಿಕೆಯ ಪ್ರಣಾಳಿಕೆಯಲ್ಲಿ ಸನಾತನ ಗುರುಕುಲ ಪದ್ಧತಿ ಶಿಕ್ಷಣ ಕೇಂದ್ರ ನಿರ್ಧರಿಸಲಾಗಿತ್ತು. ಈ ಬಗ್ಗೆ ಸಭೆ ನಡೆಸಿ, ರಾಮಮಂದಿರ ಪ್ರತಿಷ್ಠಾಪನೆಯ ದಿನವೇ ಗುರುಕುಲ ಕೇಂದ್ರ ಆರಂಭಿಸುತ್ತಿದ್ದೇವೆ. ಕರ್ನಾಟಕದಲ್ಲಿ 5,000 ಕೇಂದ್ರ ತೆರೆಯಲು ಚಿಂತಿಸಿದ್ದು, 5-10 ವರ್ಷದವರು ಪಾಲ್ಗೊಳ್ಳಬಹುದಾಗಿದೆ. ನಗರ, ಗ್ರಾಮೀಣ ಭಾಗದಲ್ಲಿ ಕೇಂದ್ರ ಇರಲಿದೆ. ಪ್ರಪ್ರಥಮವಾಗಿ ಉತ್ತರ ಕನ್ನಡದಲ್ಲೇ ಗುರುಕುಲ ಶಿಕ್ಷಣ ಕೇಂದ್ರ ಪ್ರಾರಂಭವಾಗಲಿದ್ದು, ಸನಾತನ ಧರ್ಮ ರಕ್ಷಕರು ಮಾರ್ಗದರ್ಶನ ಮಾಡಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ದಿನಕರ ನಾಗೇಕರ, ಚಂದ್ರಕಾಂತ ಹರಿಕಂತ್ರ, ಶಂಕರ ಗುನಗಿ, ಶರತ ಬಾಂದೇಕರ, ಚಂದ್ರಕಾಂತ ನಾಯ್ಕ, ಕೃಷ್ಣಾನಂದ ತಾರಿ, ಅಶೋಕ ರಾಣೆ, ರಮೇಶ ನಾಯ್ಕ, ಚಂದ್ರಶೇಖರ ಹರಿಕಂತ್ರ ಉಪಸ್ಥಿತರಿದ್ದರು.