Slide
Slide
Slide
previous arrow
next arrow

ಧರ್ಮ,ದೇವರ ಹೆಸರಿನಲ್ಲಿ ರಾಜಕೀಯ: ರವೀಂದ್ರ ನಾಯ್ಕ ವಿಷಾದ

300x250 AD

ಶಿರಸಿ: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಧರ್ಮ ಮತ್ತು ದೇವರ ಹೆಸರಿನಲ್ಲಿ ರಾಜಕೀಯ ಚಟುವಟಿಕೆಗಳನ್ನು ಸಕ್ರಿಯಗೊಳಿಸುತ್ತಿರುವುದು ಸಂವಿಧಾನ ವಿರೋಧ ಕ್ರಮ. ಇಂತಹ ರಾಜಕೀಯ ಪ್ರೇರಿತ ಘಟನೆಗಳನ್ನು ತೀವ್ರವಾಗಿ ಖಂಡಿಸಲಾಗುವುದು ಎಂದು ಕಾಂಗ್ರೇಸ್ ಮುಖಂಡ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಭಾರತೀಯ ಸಂವಿಧಾನದ ಅಡಿಯಲ್ಲಿ ಧರ್ಮ ಮತ್ತು ರಾಜಕೀಯ ಪ್ರೇರಿತ ಹೇಳಿಕೆ ಮತ್ತು ಚಟುವಟಿಕೆಗಳಿಗೆ ನಿರ್ಬಂಧ ಇದ್ದಾಗಲೂ ಇಂತಹ ಘಟನೆಗಳು ಪುನರಾವರ್ತನೆ ಆಗುತ್ತಿರುವುದು ವಿಷಾದಕರ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ವಿರುದ್ಧ ಉಪಯೋಗಿಸಿರುವ ಪದಗಳು ಧರ್ಮ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದ್ದು ಇರುತ್ತದೆ. ಸಂಪ್ರದಾಯ ಬದ್ಧ, ಸುಸಂಸ್ಕೃತ, ವೇದ, ಉಪನಿಷತ್ ಮತ್ತು ಸನಾತನ ಧರ್ಮದ ಅನುಯಾಯಿಗಳಾಗಿ, ಲೋಕಸಭಾ ಸದಸ್ಯರು ಆಡಿರುವ ಮಾತುಗಳು ಅವರು ಅನುಸರಿಸುವ ಧರ್ಮಕ್ಕೆ ಅವಮಾನ ಮಾಡಿದಂತಾಗಿದೆ. ಅಸಂವಿಧಾನ ಬದ್ಧ ಮತ್ತು ಅಧರ್ಮದ ಮಾತುಗಳಿಂದ ಸಮಾಜದ ಮೇಲಾಗುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಅವರು ಅನುಸರಿಸುವ ಧರ್ಮ ಪೀಠಗಳು ಕಿವಿಮಾತನ್ನು ಹೆಳಬೇಕೆಂದು ರವೀಂದ್ರ ನಾಯ್ಕ ಈ ಸಂದರ್ಭದಲ್ಲಿ ಕೋರಿಕೊಂಡರು.

300x250 AD

ಪೋಲೀಸರು ವಿಫಲ:
ಇತ್ತೀಚಿನ ದಿನಗಳಲ್ಲಿ ಅಸಂವಿಧಾನ ಬದ್ಧ, ಪ್ರಚೋದಿತ ಬಾಷಣ ಮೂಲಕ ಕಾನೂನು ಉಲ್ಲಂಘಿಸಿರುವ ಲೋಕಸಭಾ ಸದಸ್ಯ ಅನಂತಕುಮಾರ ಹೆಗಡೆ ವಿರುದ್ಧ ಸೂಕ್ತ ಕ್ರಮ ಜರುಗಿಸುವಲ್ಲಿ ಜಿಲ್ಲಾಡಳಿತ ಮತ್ತು ಪೋಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.

Share This
300x250 AD
300x250 AD
300x250 AD
Back to top