ಸಿದ್ದಾಪುರ : ಸಿದ್ದಾಪುರ ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ, ಕೋಲಸಿರ್ಸಿ ಸರ್ಕಾರಿ ಪದವು ಪೂರ್ವ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಾಲೇಜು ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಎಂಜಿಸಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾಕ್ಟರ್ ಸುರೇಶ್ ಎಸ್. ಗುತ್ತಿಕರ್ ಉದ್ಘಾಟಿಸಿ ಮಾತನಾಡಿ ಹೊರ ಜಗತ್ತು ನೋಡಿ ಯಶಸ್ವಿಯಾಗುವುದನ್ನು ಕಲಿತುಕೊಳ್ಳಬೇಕು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾಜೇಶ್ ನಾರಾಯಣ್ ನಾಯ್ಕ ಕತ್ತಿ ಮಾತನಾಡಿ ಕಲೆ ಎನ್ನುವುದು ಎಲ್ಲರನ್ನು ಕರೆಯುತ್ತದೆ ಪ್ರಯತ್ನ ಮಾಡಿದಾಗ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಮರಳಿ ಪ್ರಯತ್ನ ಮಾಡುವ ಮೂಲಕ ಸಮಾಜದಲ್ಲಿ ಒಳ್ಳೆಯವರಾಗಿ ಊರಿಗೆ ಹಾಗೂ ಕಾಲೇಜಿಗೆ ಹೆಸರು ತರಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರಶಾಂತ್ ತಾರಿಬಾಗಿಲು ಮಾತನಾಡಿ ಕಳೆದ ಸಾಲಿನಲ್ಲಿ ನಮ್ಮ ಕಾಲೇಜು ಉತ್ತಮ ಫಲಿತಾಂಶ ದೊರೆತಿದೆ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಮಾನವೀಯ ಮೌಲ್ಯವನ್ನು ಬೆಳೆಸಿಕೊಳ್ಳಬೇಕು ರಾಮ ಕಂಡ ರಾಮ ರಾಜ್ಯದ ಕನಸನ್ನು ನನಸಾಗಿಸಬೇಕು ನೈತಿಕ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಗೌಡರ್, ನಿಕಟ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಾದೇವ ನಾಯ್ಕ ದೊಡ್ಮನೆ, ಮಾತನಾಡಿದರು. ಗ್ರಾಮ್ ಪಂಚಾಯತ್ ಸದಸ್ಯೆ ಉಮಾ ಡಿ ನಾಯ್ಕ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕ್ರೀಡಾ ವಿಭಾಗ ಹಾಗೂ ಕ್ರೀಡಾ ವಿಭಾಗದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು, ಪ್ರತಿಭಾ ಪುರಸ್ಕಾರ ಪಡೆದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ವಿಭಾಗದ ಯಾದಿಯನ್ನು ಅತಿಥಿ ಉಪನ್ಯಾಸಕಿ ಭಾಗ್ಯಶ್ರೀ ನಾಯ್ಕ, ಕ್ರೀಡಾ ವಿಭಾಗದ ಯಾದಿಯನ್ನು ಅತಿಥಿ ಉಪನ್ಯಾಸಕಿ ಅಶ್ವಿನಿ ಹಾಗೂ ಪ್ರತಿಭಾ ಪುರಸ್ಕಾರದ ಯಾದಿಯನ್ನು ಉಪನ್ಯಾಸಕ ಮಂಜಪ್ಪ ವಾಚಿಸಿದರು. .
ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಾದೇವ ನಾಯ್ಕ ದೊಡ್ಮನೆಯವರನ್ನು ಸನ್ಮಾನಿಸಲಾಯಿತು.