Slide
Slide
Slide
previous arrow
next arrow

ಅನಾನಸ್ ಬೆಳೆ ನಾಶ, ರೈತರ ಮೇಲೆ ಹಲ್ಲೆ: ಕ್ರಮ ಕೈಗೊಳ್ಳಲು ಆಗ್ರಹ

300x250 AD

ಸಿದ್ದಾಪುರ: ಪಟ್ಟಣದ ಹೊಸೂರಿನ ಸ.ನಂ.202ರಲ್ಲಿ ಬೆಳೆದಿದ್ದ ಅನಾಸನ್ ಬೆಳೆಯನ್ನು ಅರಣ್ಯ ಇಲಾಖೆ ಕಿತ್ತು ಬಿಸಾಡಿದ್ದು ಖಂಡನೀಯ ಹಾಗೂ ಅಲ್ಲಿಯ ರೈತರ ಮೇಲೆ ಹಲ್ಲೆ ಮಾಡಿರುವ ವಾಚಮನ್ ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿ ತಾಲೂಕು ಬಿಜೆಪಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ ಹಾಗೂ ಆರ್‌ಎಫ್‌ಒಗೆ ಸೋಮವಾರ ಮನವಿ ಸಲ್ಲಿಸಿದರು.

ಪಟ್ಟಣದ ಹೊಸೂರು ಲಕ್ಷ್ಮಿನಗರದ ಗದ್ದೆಯ ಮೇಲ್ಬಾಗದಲ್ಲಿ ಬೆಳೆದ ಅನಾನಸ್ ಬೆಳೆಯನ್ನು ಹೊಸ ಅತಿಕ್ರಮಣ ಎಂದು ಆರೋಪಿಸಿ ಅರಣ್ಯ ಇಲಾಖೆಯವರು ನಾಶಪಡಿಸಿದ್ದಾರೆ. ಸುಮಾರು ಹತ್ತು ಗುಂಟೆಯಷ್ಟು ಅರಣ್ಯ ಇಲಾಖೆಯ ಜಾಗ ಇದೆ. ನೂರಾರು ವರ್ಷದಿಂದ ಇದೇ ಜಾಗದಲ್ಲಿ ನೀಲಗಿರಿ ಬೆಳೆಸಿದ್ದಾರೆ. ಆಗ ಯಾವುದೇ ತಕರಾರು ಮಾಡದ ಅರಣ್ಯ ಇಲಾಖೆಯವರು ಈಗ ಅದೇ ಜಾಗದಲ್ಲಿ ಅನಾನಸ್ ಬೆಳೆದಿರುವಾಗ ತಕಾರರು ಪಡಿಸಿದ್ದಲ್ಲದೆ ಅನಾನಸ್ ಗಿಡವನ್ನು ಕಿತ್ತು ಲಕ್ಷಾಂತರ ರೂ. ಹಾನಿ ಪಡಿಸಿದ್ದಾರೆ.. ಇದನ್ನು ಪ್ರಶ್ನೆ ಮಾಡಿದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ. ಅಧಿಕಾರಿಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಮುಖಂಡರಿಗೆ ಹಾಗೂ ಅತಿಕ್ರಮಣದಾರರ ಪರವಾಗಿ ಇದ್ದೇನೆ ಎಂದು ಹೇಳುವ ಮುಖಂಡರಿಗೆ ಧಿಕ್ಕಾರ ಕೂಗಿದರು. ಹಾನಿಯಾದ ಅನಾನಸ್ ಬೆಳೆಗೆ ಪರಿಹಾರ ನೀಡುವುದರೊಂದಿಗೆ ರೈತರ ಮೇಲೆ ಹಲ್ಲೆ ಮಾಡಿದ ವಾಚಮನ್ ನಾರಾಯಣ ನಾಯ್ಕ ಅವರನ್ನು ವಜಾಗೊಳಿಸಬೇಕು ಇಲ್ಲವಾದರೆ ಮುಂದಿನ ದಿದನಲ್ಲಿ ಉಗ್ರಹೋರಾಟ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು. ಅಲ್ಲದೇ ತಾಲೂಕಿನ ಹಲವೆಡೆ ಅರಣ್ಯ ಜಾಗದಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಹಾಗೂ ತಮ್ಮ ಉದ್ಯೋಗಕ್ಕಾಗಿ ಅರಣ್ಯವನ್ನು ನಾಶಮಾಡುತ್ತಿದ್ದಾರೆ. ಜನ, ಜಾನುವಾರುಗಳಿಗೂ ತೊಂದರೆ ಆಗುತ್ತಿದೆ. ಈ ಕುರಿತು ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

300x250 AD

ತಾಲೂಕು ಬಿಜೆಪಿ ಅಧ್ಯಕ್ಷ ಮಾರುತಿ ನಾಯ್ಕ ತಹಸೀಲ್ದಾರ ಎಂ.ಆರ್.ಕುಲಕಣಿ ಹಾಗೂ ಆರ್‌ಎಫ್‌ಒ ಬಸವರಾಜ ಬೋಚಳ್ಳಿ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಡಾ.ರವಿ ಹೆಗಡೆ ಹೂವಿನಮನೆ, ತೋಟಪ್ಪ ನಾಯ್ಕ, ಗುರುರಾಜ ಶಾನಭಾಗ, ನಂದನ ಬೋರ್ಕರ್, ತಿಮ್ಮಪ್ಪ ಎಂ.ಕೆ.ರಾಘವೇಂದ್ರ ಶಾಸ್ತ್ರೀ, ಅಣ್ಣಪ್ಪ ನಾಯ್ಕ, ಸುರೇಶ ನಾಯ್ಕ ಬಾಲಿಕೊಪ್ಪ, ಶ್ರೀಕಾಂತ ಭಟ್ಟ, ಕೃಷ್ಣಮೂರ್ತಿ ನಾಯ್ಕ ಐಸೂರು, ಆದರ್ಶ ಪೈ, ರಾಘವೇಂದ್ರ ನಾಯ್ಕ, ರಾಜೇಂದ್ರ ಕಿಂದ್ರಿ ಇತರರಿದ್ದರು.

Share This
300x250 AD
300x250 AD
300x250 AD
Back to top