Slide
Slide
Slide
previous arrow
next arrow

ಬೇಳಾ ಬಂದರ ಶಾಲೆ ಅಮೃತ ಮಹೋತ್ಸವ: ಗುರುವಂದನೆ, ಸಾಧಕರಿಗೆ ಸನ್ಮಾನ

300x250 AD

ಅಂಕೋಲಾ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಳಾ ಬಂದರ ಇದರ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಂದನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವಿಶಿಷ್ಟವಾಗಿ ನಡೆಯಿತು.

ಪ್ರಸ್ತುತ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಇದೇ ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಹಾಗೂ ಈ ಶಾಲೆಯಲ್ಲಿ‌ ಕಲಿತು ಶಿಕ್ಷಕ ವೃತ್ತಿಯಲ್ಲಿರುವರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ನಡೆದ ಈ ಒಂದು ಅಪೂರ್ವ ಕ್ಷಣ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಸನ್ಮಾನಿತರ ಪರವಾಗಿ ನಿವೃತ್ತ ಶಿಕ್ಷಕಿ ಸರಸ್ವತಿ ಶೆಟ್ಟಿ ಮಾತನಾಡಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಮಕ್ಕಳ ಪ್ರೀತಿ, ಪಾಲಕರ ಕಾಳಜಿ ಮತ್ತು ಗ್ರಾಮಸ್ಥರ ಸಹಕಾರ ಇವೆಲ್ಲವೂ ನೆನಪಿನಾಳದಲ್ಲಿ ಸದಾಕಾಲ ಉಳಿಯುತ್ತದೆ. ನಾವು ಕಲಿಸಿದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಸ್ಥಾನಮಾನದಲ್ಲಿದ್ದು ನಮ್ಮನ್ನು ಗೌರವಿಸಿರುವದು ನಮಗೆ ಧನ್ಯತಾ ಭಾವ ಮೂಡಿಸಿದೆ ಎಂದರು. ನಂತರ ನಡೆದ‌ ಸಭಾ ಕಾರ್ಯಕ್ರಮದಲ್ಲಿ ಗಣ್ಯರು ಮಾತನಾಡಿ ಎಪ್ಪತೈದು ವರ್ಷಗಳಿಂದ ಇಂದಿಗೂ ತನ್ನ ಮೌಲ್ಯವನ್ನು ಉಳಿಸಿಕೊಂಡ ಶಾಲೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

300x250 AD

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಚಲನ ಚಿತ್ರರಂಗದ ಕಲಾವಿದ ರವೀಂದ್ರ ಎಲ್. ನಾಯ್ಕ ಕಾರ್ಯಕ್ರಮದ ಸಂಘಟನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಮನೆಯ ಕಾರ್ಯಕ್ರಮದಂತೆ ಅಭಿಮಾನದಿಂದ ಇಷ್ಟು ದೊಡ್ಡ ಕಾರ್ಯಕ್ರಮ ಆಯೋಜಿಸಿರುವದು ಶ್ಲಾಘನೀಯ ಎಂದರು. ವೇದಿಕೆಯಲ್ಲಿ ಅಮೃತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಉಮೇಶ‌ ನಾಯ್ಕ ಸ್ವಾಗತಿಸಿದರು. ಮಂಜುನಾಥ ದತ್ತಾ ನಾಯ್ಕ ವಂದಿಸಿದರು.

ಗ್ರಾಮದ ಅಭಿವೃದ್ದಿಗೆ ಶಾಲೆಗಳೇ ಪೂರಕ. ಒಂದು ಗ್ರಾಮದಲ್ಲಿ ಒಳ್ಳೆಯ ಅಭಿವೃದ್ಧಿಯಾಗಬೇಕಾದರೆ ಅಲ್ಲಿನ ಶಾಲೆಯಲ್ಲಿ ಸಿಗುವ ಉತ್ತಮ ಶಿಕ್ಷಣವೂ ಪೂರಕವಾಗುತ್ತದೆ. ಉತ್ತಮ ಶಿಕ್ಷಣದಿಂದ ಜನರಲ್ಲಿ ಸಾಮಾಜಿಕ ಜವಾಬ್ದಾರಿಯೂ ಹೆಚ್ಚುತ್ತದೆ. ಗ್ರಾಮೀಣ ಭಾಗದಲ್ಲಿ ಸರಕಾರೀ ಶಾಲೆಗಳೇ ಜೀವಾಳವಾಗಿದೆ. ಸರಕಾರೀ ಶಾಲೆಯಲ್ಲಿ‌ ಕಲಿತವರೇ ಹೆಚ್ಚು ಸಾಧನೆ ಮಾಡುತ್ತಿರುವದನ್ನು ಕಾಣುತ್ತಿದ್ದೇವೆ. ಇಂತಹ ಶಾಲೆಗಳ ಅಭಿವೃದ್ಧಿಗಾಗಿ ಜನರು ಸಂಪೂರ್ಣ ಸಹಕಾರ ನೀಡಿದರೆ ಮತ್ತೆ ಸರಕಾರಿ ಶಾಲೆಗಳ ವೈಭವದ ದಿನಗಳು ಬರುವದರಲ್ಲಿ ಸಂಶಯವಿಲ್ಲ.
— ಹನುಮಂತ ಗೌಡ.
ನಾಟಿ ವೈದ್ಯರು.ಜಿಲ್ಲಾಧ್ಯಕ್ಷರು ಹಾಲಕ್ಕಿ ಒಕ್ಕಲಿಗರ ಸಂಘ ಉತ್ತರಕನ್ನಡ

Share This
300x250 AD
300x250 AD
300x250 AD
Back to top