ಯಲ್ಲಾಪುರ: ಅತಿಕ್ರಮಣ ಸಾಗುವಳಿ ಭೂಮಿಗೆ ಶೀಘ್ರದಲ್ಲಿ ಪಟ್ಟಾ ವಿತರಿಸಬೇಕೆಂದು ಆಗ್ರಹಿಸಿ ತಾಲೂಕಿನ ಕಿರವತ್ತಿ ಭಾಗದ ರೈತರು ಬುಧವಾರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ ಸಿ.ಜಿ.ನಾಯ್ಕ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಮ್ಮ ಅತಿಕ್ರಮಣ ಸಾಗುವಳಿ ಜಮೀನಿನಲ್ಲಿ ಕಳೆದ 50-55 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಅತಿಕ್ರಮಣ ಭೂಮಿ ಸಕ್ರಮಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದೇವೆ. 8 ವರ್ಷಗಳ ಹಿಂದೆಯೇ ಜಿಪಿಎಸ್ ಮಾಡಲಾಗಿದ್ದು, ಅದರ ಪ್ರತಿ ನಮ್ಮ ಬಳಿ ಇದೆ. ಆದರೆ ಈವರೆಗೂ ಪಟ್ಟಾ ಮಾತ್ರ ನೀಡಿಲ್ಲ.
ನಮ್ಮ ಸಮಸ್ಯೆಗೆ ಸ್ಪಂದಿಸಿ, ಸಾಗುವಳಿ ಜಮೀನಿನ ಪಟ್ಟಾ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮ್ಸಿ ವಾಲ್ಮೀಕಿ, ಕಿರವತ್ತಿ ಭಾಗದ ರೈತರಾದ ಥಾಮಸ್ ಕಲಘಟಗಿ, ಉದಯ ಸೋಮಾಪುರಕರ್, ಲಲಿತಾ ನಾಯ್ಕ, ಸರೋಜಾ ಮಿರಾಶಿ, ಶಾಂತಾ ಮಿರಾಶಿ, ಕೃಷ್ಣಮ್ಮ ಕಿರವತ್ತಿ, ಸಾವಿತ್ರಿ ಸೋಮಾಪುರಕರ್, ಮುನ್ನಾಬಿ, ಜುಬೇದಾ ನದಾಫ್, ಇಮಾನಬಿ ಖಾನ್, ಸಾಹಿಬಿ ಇತರರಿದ್ದರು.