Slide
Slide
Slide
previous arrow
next arrow

ರಾಜ್ಯ ಮಟ್ಟದ ಹಿಂದುಸ್ಥಾನಿ ಗಾಯನ ಸ್ಪರ್ಧೆ

300x250 AD

ಶಿರಸಿ : ಸಂಗೀತ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಉತ್ತೇಜಿಸುವುದಕ್ಕಾಗಿ ಹಾಗೂ ಅವರಿಗೆ ಒಳ್ಳೆ ವೇದಿಕೆ ಮೂಲಕ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಜೊತೆ ಜೊತೆಗೆ ಉದಯೋನ್ಮುಖ ಕಲಾವಿದರನ್ನು ಪರಿಚಯಿಸಿ ಪ್ರೋತ್ಸಾಹಿಸುವ ಉದ್ದೇಶ ಇಟ್ಟುಕೊಂಡು ಶಿರಸಿ ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರ ರಾಜ್ಯ ಮಟ್ಟದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಸ್ಪರ್ಧೆಯನ್ನು ಏರ್ಪಡಿಸಿದೆ.

ಸ್ಪರ್ಧೆ 15 ರಿಂದ 25 ವರ್ಷ ವಯಸ್ಸಿನವರಿಗೆ ಮಾತ್ರ ಅವಕಾಶವಿದ್ದು ವಿಜೇತರಾದ ಸ್ಪರ್ಧಿಗಳಿಗೆ ಪ್ರಮಾಣ ಪತ್ರ, ಸ್ಮರಣಿಕೆ ಹಾಗೂ ನಗದು ಬಹುಮಾನವನ್ನು ನೀಡಲಾಗುವುದು. ಸ್ಪರ್ಧೆಯ ನಿಯಮಾವಳಿಗಳನ್ನು ಸಂಬಂಧಪಟ್ಟ ಸಂಗೀತ ಶಾಲೆಗಳಿಗೆ ಈಗಾಗಲೇ ಕಳಿಸಲಾಗಿದ್ದು ಎರಡು ಹಂತದಲ್ಲಿ ಸ್ಪರ್ಧೆ ನಡೆಯಲಿದೆ. ಮೊದಲ ಹಂತವಾಗಿ ವಿಡಿಯೋ ರೇಕಾರ್ಡ್ನ ಮೂಲಕವಾದರೆ ನಂತರದಲ್ಲಿ ಅಂತಿಮ ಹಂತದಲ್ಲಿ 5 ಜನರನ್ನು ಆಯ್ಕೆಗೊಳಿಸಿ ಆರೋಹಿ ಸಂಸ್ಥೆಯ ವಾರ್ಷಿಕ ಸಂಗೀತ ಸಮ್ಮೇಳನದಲ್ಲಿ ಹಾಡಿಸಲಾಗುವುದು. ವಿಶೇಷವಾಗಿ ಸ್ಪರ್ಧಿಗಳು 15 ನಿಮಿಷದ ಕಾಲಾವಕಾಶದಲ್ಲಿ ಒಂದು ಬಡಾಖ್ಯಾಲ್ ಮತ್ತು ಚೋಟಾಖ್ಯಾಲ್‌ನ್ನು ಹಾಡಬೇಕಾಗಿದೆ. ಶ್ರುತಿ, ರಾಗದ ಶುದ್ಧತೆ, ತಾಳ ಇತ್ಯಾದಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಸ್ಪರ್ಧಿಗಳು ಹಾಡುವಾಗ ಮ್ಯಾನುವಲ್ ಅಥವಾ ಎಲೆಕ್ಟ್ರಾನಿಕ್ ಉಪಕರಣ ಬಳಸಬಹುದಾಗಿದೆ. ಪ್ರವೇಶ ಶುಲ್ಕ ಕೇವಲ 150 ರೂಪಾಯಿಯಾಗಿದ್ದು, ಪ್ರಥಮ ಬಹುಮಾನವಾಗಿ 7,000 ಹಾಗೂ ದ್ವಿತೀಯವಾಗಿ 5000 ಮತ್ತು ತೃತೀಯವಾಗಿ 3000 ರೂಗಳನ್ನು ಹಾಗೂ ಚತುರ್ಥ 2000, ಪಂಚಮವಾಗಿ ರೂ. 1000 ನಿಗದಿಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9448965454 ಸಂಪರ್ಕಿಸಬಹುದಾಗಿದ್ದು, ನೋಂದಣಿಗೆ ಕೊನೆಯ ದಿನಾಂಕ ಡಿಸೆಂಬರ್ 29 ಆಗಿದೆ. ನಂತರದಲ್ಲಿ ಸಂಸ್ಥೆಯ ವಾರ್ಷಿಕ ಸಮ್ಮೇಳನ ಜನವರಿ 14 ರಂದು ಶಿರಸಿ ಲಯನ್ಸ್ ಸಭಾಭವನದಲ್ಲಿ ನಡೆಯಿದೆ ಎಂದು ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top