ಭಟ್ಕಳ: ಭಟ್ಕಳ ರಿಕ್ಷಾ ಚಾಲಕ ಮಾಲಕ ಸಂಘದ ನೂತನ ಅಧ್ಯಕ್ಷರಾಗಿ ವೆಂಕಟೇಶ ನಾಯ್ಕ ಆಸರಕೇರಿಯ 17 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ತಾಲೂಕಿನ ಆಸರಕೇರಿಯ ನಿಚ್ಛಲಮಕ್ಕಿ ದೇವಸ್ಥಾನದ ಸಭಾಭವನದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿಂದಿನ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ, ಗಣಪತಿ ನಾರಾಯಣ ನಾಯ್ಕ, ವೆಂಕಟೇಶ ಎಸ್ ನಾಯ್ಕ ಸ್ಪರ್ಧಿಸಿದ್ದರು. ತಾಲೂಕಿನ ಶಿರಾಲಿಯಿಂದ ಗೊರ್ಟೆಯವರೆಗೆ ಸುಮಾರು 1500ಕ್ಕೂ ಅಧಿಕ ಅಟೋ ರಿಕ್ಷಾಗಳಿದ್ದು ಇದರಲ್ಲಿ ಆಯ್ದ 32 ಸದಸ್ಯರಿಗೆ ಮಾತ್ರ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಹಿಂದಿನ ಅಧ್ಯಕ್ಷ ಕೃಷ್ಣಾ ನಾಯ್ಕ 1 ಮತ ಪಡೆದು ಮೂರನೇ ಸ್ಥಾನ ಪಡೆದರೆ, ಗಣಪತಿ ನಾಯ್ಕ 14 ಮತಗಳನ್ನು ಪಡೆದು 2ನೇ ಸ್ಥಾನಕ್ಕೆ ಸಂತೃಪ್ತಿ ಹೊಂದಿದ್ದಾರೆ. ವೆಂಕಟೇಶ ನಾಯ್ಕ 17 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ದಾಸ ನಾಯ್ಕ ಶಿರಾಲಿ, ಶ್ರೀನಿವಾಸ ನಾಯ್ಕ ಹನುಮಾನ ನಗರ, ಫಯಾಜ್ ಪಟೇಲ್, ಪ್ರಧಾನ ಕಾರ್ಯದರ್ಶಿಗಳಾಗಿ ಮಾದೇವ ಜಟ್ಟಾ ನಾಯ್ಕ, ಖಜಾಂಚಿಯಾಗಿ ಲೋಕೇಶ ಆಚಾರ್ಯ, ಸಹಕಾರ್ಯದರ್ಶಿಯಾಗಿ ಈಶ್ವರ ನಾಯ್ಕ, ರೋಜಾರಿಯೋ ಡಯಾಸ್, ಸಲೀಂ ಆಯ್ಕೆಯಾಗಿದ್ದಾರೆ. ಚುನಾವಣೆಯು ಲಕ್ಷ್ಮಣ ನಾಯ್ಕ, ಪರಮೇಶ್ವರ ನಾಯ್ಕ, ಮಂಜುನಾಥ ನಾಯ್ಕ ಮಣ್ಕುಳಿ, ಮಂಜುನಾಥ ನಾಯ್ಕ ಪುರವರ್ಗ, ಸಾಧಿಖ ನೇತೃತ್ವದಲ್ಲಿ ನಡೆದಿದೆ.