Slide
Slide
Slide
previous arrow
next arrow

ವೃದ್ಧೆಗೆ ಕೊಲೆಗೆ ಯತ್ನಿಸಿದ ಆರೋಪಿ ಅಂದರ್

300x250 AD

ಭಟ್ಕಳ: ಮುಂಡಳ್ಳಿ ಜೋಗಿ ಮನೆ ಸಮೀಪ ಮನೆಯಲ್ಲಿದ್ದ ಒಂಟಿ ವೃದ್ಧೆಯನ್ನು ಟಾರ್ಗೆಟ್ ಮಾಡಿ ಕೊಲೆಗೆ ಯತ್ನಿಸಿದ ಆರೋಪಿಯನ್ನು 48 ಗಂಟೆಯೊಳಗಾಗಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದರೆ.

ಬಂಧಿತ ಆರೋಪಿಯನ್ನು ಶುಕ್ರಯ್ಯ ನಾರಾಯಣ ದೇವಾಡಿಗ ಎಂದು ತಿಳಿದು ಬಂದಿದೆ. ಈತ ವೃದ್ದೆಯ ಪರಿಚಯಸ್ತನಾಗಿದ್ದನು. ವೃದ್ಧೆಯ ಮಗ ಉಡುಪಿಯಲ್ಲಿರುವುದರಿಂದ ವೃದ್ಧೆಯ ಮನೆಗೂ ಇತನಿಗೂ ಓಡನಾಟ ಹೆಚ್ಚಿದ್ದು ಮನೆಯ ತೋಟದ ಕೆಲಸ ಹಾಗೂ ವೃದ್ಧೆಗೆ ಸಣ್ಣ ಪುಟ್ಟ ಸಹಾಯ ಮಾಡುತ್ತಿದ್ದನು.ಇದನ್ನೇ ನೆಪವಾಗಿಟ್ಟುಕೊಂಡು ಯಾರಿಗೂ ತಿಳಿಯದಂತೆ ವೃದ್ಧೆಯ ಮನೆಯ ಕಪಾಟಿನಲ್ಲಿದ್ದ ಬಂಗಾರದ ಆಭರಣನ್ನು ಸಲೀಸಾಗಿ ಕದ್ದು ಭಟ್ಕಳದ ಖಾಸಗಿ ಫೈನಾನ್ಸ್ ಒಂದರಲ್ಲಿ ಅಡಮಾನ(ವತ್ತೆ) ಇಡಲು ಹೋದ ವೇಳೆ ಆರೋಪಿ ಬೆರಳಚ್ಚು ಬರದ ಕಾರಣ ಆತನ ಸ್ನೇಹಿತನ ಹೆಸರಿನಲ್ಲಿ ಆಭರಣಗಳನ್ನು ಅಡವಾಗಿಟ್ಟು ಅದೇ ಸ್ನೇಹಿತನ ಹೆಸರಿನಲ್ಲಿ ಹೊಸ ಬೈಕ್ ಖರೀದಿ ಮಾಡಿ ಅದೇ ಸ್ನೇಹಿತನಿಗೆ 60 ಸಾವಿರ ಹಣವನ್ನು ಸಾಲವಾಗಿ ನೀಡಿದ್ದನು.

ಅದಾಗಲೇ ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾಗಿರುವುದು ವೃದ್ಧೆಗೆ ತಿಳಿದು ಬಂದಿತ್ತು. ಆದರೆ ಈ ಬಗ್ಗೆ ಪೊಲೀಸ ಠಾಣೆಯಲ್ಲಿ ಯಾವುದೇ ದೂರು ನೀಡಲು ಮುಂದಾಗಿರಲಿಲ್ಲ. ಆ ವೇಳೆ ಆರೋಪಿ ಬೈಕ್ ಖರೀದಿಸಿರುವುದು ವೃದ್ಧೆಗೆ ತಿಳಿದು ಆರೋಪಿ ಬಳಿ ಪದೇ ಪದೇ ಹಣವಿಲ್ಲ ಎಂದು ಹೇಳುತ್ತಿದ್ದವನು ಹೇಗೆ ಬೈಕ್ ಖರೀದಿ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಳು. ಇದನ್ನು ಗಮನಿಸಿದ ಆರೋಪಿ ಒಂದಲ್ಲ ಒಂದು ದಿನ ಇದು ನನಗೆ ಸಮಸ್ಯೆ ಇದುರಾಗ ಬಹುದೆಂದು ತಿಳಿದು ವೃದ್ಧೆಯ ಸಾವಿಗೆ ಸಂಚು ರೂಪಿಸಿ ಯಾವುದೇ ಅನುಮಾನ ಬಾರದಂತೆ ಸಹಜವಾಗಿ ಸಾಯಿಸುವ ರೀತಿಯಲ್ಲಿ ರವಿವಾರ ಸಂಜೆ ಟಿವಿ ನೋಡುತ್ತಿದ್ದ ವೃದ್ಧೆಯ ಮುಖಕ್ಕೆ ಬಟ್ಟೆಯನ್ನು ಸುತ್ತಿ ಉಸಿರು ಗಟ್ಟಿಸಿ ಸಾಯಿಸಲು ಯತ್ನಿಸಿದಾಗ ವೃದ್ಧೆ ಕಿರುಚಿಕೊಂಡ ವೇಳೆ ಅಲ್ಲಿಂದ ಓಡಿ ಪರಾರಿಯಾಗಿದ್ದನು.

ಬಳಿಕ ಘಟನೆ ತಿಳಿದು ಮನೆಯ ಬಳಿ ಅಕ್ಕ ಪಕ್ಕದ ಮನೆಯರುವರು ಬಂದು ಜಮಾವಣೆಯಾದ ವೇಳೆ ಈತನು ಕೂಡ ಯಾರಿಗೂ ಅನುಮಾನ ಬಾರದಂತೆ ಅಲ್ಲಿ ಬಂದು ವೃದ್ಧೆಯ ಕ್ಷೇಮ ವಿಚಾರಣೆ ಮಾಡಿದ್ದನು ಆ ವೇಳೆಯಲ್ಲಿ ವೃದ್ಧೆ ಇದೆ ರೀತಿ ಬಟ್ಟೆ ಧರಿಸಿದವನು ನನ್ನ ಸಾವಿಗೆ ಯತ್ನಿಸಿದ್ದನು ಎಂದು ಹೇಳಿದಾಗ ಆರೋಪಿಯ ಅಣ್ಣ ನನ್ನ ತಮ್ಮನ ಮೇಲೆ ಅನುಮಾನ ಪಡುತ್ತಿದ್ದಿರಾ ಎಂದು ಗಲಾಟೆ ಮಾಡಿ ಹೋಗಿದ್ದರು.

300x250 AD

ನಂತರ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಸಿ.ಪಿ.ಐ ಚಂದನ್ ಗೋಪಾಲ ಹಾಗೂ ತಂಡ ತನಿಖೆ ಕೈಗೊಂಡಾಗ ಆರೋಪಿ ಘಟನೆ ನಡೆದ ರಾತ್ರಿ ಮುಂಡಳ್ಳಿ ಗುಡ್ಡದ ಮೇಲೆ ವಾಸವಾಗಿದ್ದನು. ಬಳಿಕ ಆರೋಪಿಗಾಗಿ ಆತನ ಮನೆಯ ಅಂಗಡಿ ಸಮೀಪ ಹೊಂಚು ಹಾಕಿ ಕುಳಿತಿದ್ದ ಪೊಲೀಸರಿಗೆ ಮನೆಗೆ ಬರುತ್ತಿದ್ದ ಆರೋಪಿಯನ್ನು ಹಿಡಿದು ವಿಚಾರಣೆ ಮಾಡಿದಾಗ ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಆರೋಪಿವನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಕಾರವಾರದ ಕಾರಾಗೃಹಕ್ಕೆ ಸಾಗಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ ಸಿಬ್ಬಂದಿಗಳಾದ ಮಂಜುನಾಥ ಗೊಂಡ , ಅಮಿತ್ ಶೇಖ್, ಈರಣ್ಣ ಪೂಜಾರಿ, ವಿನೋದ ಜಿಬಿ, ನಿಂಗನ ಗೌಡ ಪಾಟೀಲ್ ಹಾಗೂ ಚಾಲಕ ದೇವರಾಜ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top