ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ತ್ರಿಪುರಾಖ್ಯ ದೀಪೋತ್ಸವ ಸಂಭ್ರಮ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇ0ದ್ರ ಸರಸ್ವತೀ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಅತ್ಯಂತ ವಿಜೃಂಭಣೆಯಿ0ದ ನಡೆಯಿತು.
ಮಠದ ಆವರಣದಲ್ಲಿ ದಶ ಸಹಸ್ರಕ್ಕೂ ಅಧಿಕ ದೀಪಗಳನ್ನು ಬೆಳಗಲಾಯಿತು. ಮಠಾದೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇ0ದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ವಿಶೇಷವಾಗಿ ಶ್ರೀ ಲಕ್ಷ್ಮೀನೃಸಿಂಹ ದೇವರ ಪುಷ್ಪ ರಥೋತ್ಸವ ನಡೆಯಿತು. ನಂತರ ಪಲ್ಲಕ್ಕಿ ಉತ್ಸವ, ರಾಜೋಪಚಾರ ಪೂಜೆ, ಅಷ್ಟಾವಧಾನ ಸೇವೆ, ಶ್ರೀ ಕ್ಷೇತ್ರಪಾಲ ದೇವರ ದೀಪೋತ್ಸವ ನಡೆಯಿತು. ಹಣತೆಯ ಬೆಳಕಿನಲ್ಲಿ ಮಠ ಬೆಳಗಿತು.
ಸುತ್ತಮುತ್ತಲಿನ ಹಲವು ಊರಿನ ಭಕ್ತರು, ಶ್ರೀ ಮಠದ ವಿದ್ಯಾರ್ಥಿಗಳು ಇದ್ದರು. ಬೆಳಿಗ್ಗೆ ಶ್ರೀ ನೃಸಿಂಹಮ0ತ್ರ ಹವನ ನಡೆಯಿತು.