Slide
Slide
Slide
previous arrow
next arrow

ಗ್ರಾಮ ಸಭೆ: ಸಾರ್ವಜನಿಕರ ಪ್ರಶ್ನೆಗೆ ಅಧಿಕಾರಿಗಳು ಮೌನ

300x250 AD

ಹೊನ್ನಾವರ : ತಾಲೂಕಿನ ಮಂಕಿ ಸಿ ಚಿತ್ತಾರ ಗ್ರಾಮ ಪಂಚಾಯತದ 2023-24 ನೇ ಸಾಲಿನ ಗ್ರಾಮ ಸಭೆ ಪಂಚಾಯತ್ ವ್ಯಾಪ್ತಿಯ ಅಡಿಕೆಕುಳಿ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ಗ್ರಾಮ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ತಮ್ಮ ತಮ್ಮ ಇಲಾಖೆಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ಅದೇ ರೀತಿ ಗ್ರಾಮ ಪಂಚಾಯತ್ ನಲ್ಲಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳ ಬಗ್ಗೆ, ವಸತಿ ಯೋಜನೆಯಡಿ ಆಯ್ಕೆಯಾದ ಫಲನುಭವಿಗಳ ಬಗ್ಗೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಸಭೆಗೆ ಆಡಳಿತಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

300x250 AD

ಈ ಸಂದರ್ಭದಲ್ಲಿ ಕಳೆದ ಬಾರಿ ನಡೆದ ಗ್ರಾಮ ಸಭೆಯಲ್ಲಿ ಎಲ್ಲಾ ಇಲಾಖೆಯವರಿಗೆ ಗ್ರಾಮ ಸಭೆಯಲ್ಲಿ ಆಯಾ ಇಲಾಖೆಗೆ ಸಂಬಂಧಿಸಿದ ಎಲ್ಲಾ ಯೊಜನೆಯ ಹೆಸರು ಮತ್ತು ಹೇಗೆ ಎಲ್ಲಿ ಪಡೆದುಕೊಳ್ಳಬೇಕು ಅನ್ನುವುದರ ಯೋಜನಾ ಕೈಪಿಡಿ ಮಾಡಿ ಗ್ರಾಮ ಪಂಚಾಯತದಲ್ಲಿ ಕೊಡಲು ತಿಳಿಸಿಲಾಗಿತ್ತು. ಆದರೆ ಇನ್ನೂ ಯಾರು ಸಹ ಅದರ ಬಗ್ಗೆ ಮಾಹಿತಿ ನೀಡಿಲ್ಲ ಸಭೆಯಲ್ಲಿ ಯಾರು ಮಾಡಿದ್ದೀರಿ ಎಂದು ಸಾರ್ವಜನಿಕರು ಕೇಳಿದರೆ ಯಾರು ಉತ್ತರಿಸದೆ ಅಧಿಕಾರಿಗಳು ಮೌನವಾಗಿ ಕುಳಿತಿದ್ದರು.

Share This
300x250 AD
300x250 AD
300x250 AD
Back to top