ಶಿರಸಿ : ಮುಂಬರುವ ಕೆನರಾ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ ಪಕ್ಷದ ಟಿಕೇಟನ್ನು ಯಲ್ಲಾಪುರ ಕ್ಷೇತ್ರದ ಕೆ.ಪಿ.ಸಿ.ಸಿ. ಉಸ್ತುವಾರಿ ಹಿಂದಿನ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಆಕಾಂಕ್ಷಿಯಾಗಿರುವ ಕ್ಷತ್ರೀಯ ಮರಾಠ ಸಮುದಾಯದ ಜಿ.ಎಚ್.ಮರಿಯೋಜಿರಾವ ಅವರಿಗೆ ಕೊಡಿಸುವಂತೆ ಜಿಲ್ಲಾ ಕಾಂಗ್ರೆಸ ಹಿಂದುಳಿದ ವರ್ಗಗಳ ವಿಭಾಗ ಜಿಲ್ಲಾ ಕಾರ್ಯದರ್ಶಿ ಜಿಲ್ಲೆಯ ಮರಾಠ ಸಮುದಾಯದ ಜಿಲ್ಲಾ ಮುಖಂಡ ಪಾಂಡುರಂಗ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ಕ್ಷತ್ರೀಯ ಮರಾಠ ಸಮುದಾಯದ ಹಾಗೂ ಈ ಸಮುದಾಯಗಳ ಜಿಲ್ಲಾ ಮುಖಂಡರುಗಳ ನಿಯೋಗ ಅಂಕೋಲಾದಲ್ಲಿ ಇತ್ತೀಚೆಗೆ ಕೆನರಾ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಹಾಗೂ ರಾಜ್ಯದ ಹಿರಿಯ ಸಚಿವ ಎಚ್. ಕೆ. ಪಾಟೀಲ್, ಮಾಜಿ ಸಚಿವ ಜಿಲ್ಲೆಯ ಹಿರಿಯ ಕಾಂಗ್ರೆಸ ನಾಯಕ ಆರ್. ವಿ. ದೇಶಪಾಂಡೆ, ಕಾರವಾರ – ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್, ಶಿರಸಿಯ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್ ಸೇರಿದಂತೆ ಹಲವಾರು ಜಿಲ್ಲೆಯ ಕಾಂಗ್ರೆಸ್ ಮುಖಂಡರುಗಳಿಗೆ ಮನವಿಯನ್ನು ನೀಡಿ ವಿನಂತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಕಾರವಾರದ ವಿಷ್ಣು ಹರಿಕಾಂತ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯ್ಕ, ಸಿದ್ದಾಪುರದ ರಾಮಕೃಷ್ಣ ನಾಯ್ಕ, ಶಿರಸಿಯ ಲಿಂಗಪ್ಪ ಕೊಂಡಲಿ, ಬನವಾಸಿಯ ನಿವೃತ್ತ ಸೈನಿಕ ಶಿವಪ್ಪ ಬಡಿಗೇರ ಸೇರಿದಂತೆ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.
ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಮರಾಠಿಗರು ನಿರ್ಣಯಕರು : ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹಳಿಯಾಳ, ದಾಂಡೇಲಿ, ಜೋಯಿಡಾ, ಕಾರವಾರ, ಶಿರಸಿ, ಯಲ್ಲಾಪುರ, ಮುಂಡಗೋಡ, ಬನವಾಸಿ ಹಾಗೂ ಬೆಳಗಾಂವ್ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರ ವಿಧಾನ ಸಭಾ ಕ್ಷೇತ್ರದಲ್ಲಿ ಕ್ಷತ್ರೀಯ ಮರಾಠ ಸಮುದಾಯ ಹಾಗೂ ನಮ್ಮ ಸಮುದಾಯದ ಉಪಪಂಗಡಗಳ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟೂ ನಾಲ್ಕು ಲಕ್ಷಕ್ಕಿಂತ ಹೆಚ್ಚು ಕ್ಷತ್ರೀಯ ಮರಾಠ ಹಾಗೂ ನಮ್ಮ ಉಪ ಪಂಗಡಗಳ ಮತದಾರರು ಇರುವುದರಿಂದ ಮರಾಠ ಮತದಾರರು ಈ ಕ್ಷೇತ್ರದಲ್ಲಿ ನಿರ್ಣಯಕರು, ಈ ಕ್ಷೇತ್ರದಲ್ಲಿ ನಮ್ಮದೇ ಸಮುದಾಯದ ಕಾರವಾರದ ದಿ. ಬಿ.ಪಿ. ಕದಂ ಸಂಸದರಾಗಿದ್ದರು. ಅವರ ನಂತರ ಇದುವರೆಗೂ ನಮ್ಮ ಸಮುದಾಯದವರಿಗೆ ಯಾವುದೇ ರಾಷ್ಟ್ರೀಯ ಪಕ್ಷದವರು ಟಿಕೇಟನ್ನು ನೀಡಿಲ್ಲ. ಈ ಕ್ಷೇತ್ರದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ / ಸೋಲಿಸುವ ಶಕ್ತಿ ಕ್ಷತ್ರೀಯ ಮರಾಠ ಮತದಾರರ ಕೈಯಲ್ಲಿ ಇರುವುದರಿಂದ ಕಳೆದ 40 ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ವಿವಿಧ ರಾಜ್ಯ ಪದಾಧಿಕಾರಿಯಾಗಿ ಸದ್ಯ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಕೆ.ಪಿ.ಸಿ.ಸಿ. ಉಸ್ತುವಾರಿಯಾಗಿ ಕಾಂಗ್ರೇಸ್ ಪಕ್ಷದ ಸಂಘಟನೆ ಮತ್ತು ಹೋರಾಟದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ಜಿ. ಎಚ್. ಮರಿಯೋಜಿರಾವ ಅವರಿಗೆ ರಾಜ್ಯದ ಕ್ಷತ್ರೀಯ ಮರಾಠ ಸಮುದಾಯದ ಕೋಟಾದಲ್ಲಿ ಕಾಂಗ್ರೇಸ್ ಪಕ್ಷದ ಟಿಕೇಟನ್ನು ಕೊಡಿಸಬೇಕೆಂದು ಮನವಿಯಲ್ಲಿ ವಿನಂತಿಸಿರುವುದಾಗಿ ಜಿಲ್ಲಾ ಕ್ಷತ್ರೀಯ ಮರಾಠ ಸಮುದಾಯದ ಜಿಲ್ಲಾ ಮುಖಂಡ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಕಾರ್ಯದರ್ಶಿ ಪಾಂಡುರಂಗ ಪಾಟೀಲ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.