Slide
Slide
Slide
previous arrow
next arrow

ಯಾವ ಸಂಸ್ಥೆಗೆ ಯಾರೂ ಶಾಶ್ವತವಲ್ಲ, ಅನಿವಾರ್ಯರೂ ಅಲ್ಲ: ಹೆಬ್ಬಾರ್

300x250 AD

ಯಲ್ಲಾಪುರ: ಯಾವ ಸಂಸ್ಥೆಗೂ ಯಾರೂ ಶಾಶ್ವತ ಅಥವಾ ಅನಿವಾರ್ಯರಲ್ಲ. ಹಾಗಂತ ನಾವಿದ್ದಷ್ಟು ದಿನ ಸಂಘದ ಮತ್ತು ಸದಸ್ಯರ ಹಿತಕ್ಕಾಗಿ ಕೆಲಸ ಮಾಡಬೇಕು. ಯಾವತ್ತೂ ಸಂಘರ್ಷ ಒಳ್ಳೆಯದಲ್ಲ. ಎಲ್ಲರೂ ಕೂಡಿ ಸಂಸ್ಥೆಯನ್ನು ಕಟ್ಟಬೇಕು ಎಂದು ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.

ಅವರು ಪಟ್ಟಣದ ಟಿ.ಎಮ್.ಎಸ್ ಸಭಾಭವನದಲ್ಲಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಹಕಾರಿ ಕ್ಷೇತ್ರದಲ್ಲಿರುವ ಹಲವು ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಈ ಕುರಿತು ಸರ್ಕಾರ ನನ್ನನ್ನೂ ಸೇರಿದಂತೆ ೭ ಜನ ಸದಸ್ಯರ ಉಪಸಮಿತಿ ರಚಿಸಿದೆ. ಈ ವರೆಗೆ ವ್ಯಕ್ತಿಗತ ೮ ಪ್ರತಿನಿಧಿಗಳು ಹಾಗೂ ೬ ಜನ ಸೇವಾ ಸಹಕಾರಿ ಸಂಘದ ಪ್ರತಿನಿಧಿಗಳಿದ್ದು, ಇದು ಮುಂದುವರೆಯಲೆ0ಬ ಅಭಿಪ್ರಾಯ ಎಲ್ಲರದ್ದಾಗಿದೆ ಎಂದ ಅವರು, ಸೌಹಾರ್ದ ಸಹಕಾರಿ ಸಂಘಗಳಲ್ಲಿ ಕೆಲವು ಸಂಘಗಳು ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಎಲ್ಲ ಸಮಸ್ಯೆಗಳ ಕುರಿತು ಸರ್ಕಾರ ಗಂಭೀರವಾಗಿ ಪರೀಶೀಲಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ ಮಾತನಾಡಿ, ಸಹಕಾರಿ ಕ್ಷೇತ್ರದಿಂದ ಅಡಿಕೆ ಕಡಿಮೆ ಪ್ರಮಾಣದಲ್ಲಿ ಆವಕವಾಗುತ್ತಿದೆ ಎಂಬ ಕಾರಣಕ್ಕೆ ಆ ಕ್ಷೇತ್ರದ ಒಂದು ನಿರ್ದೇಶಕ ಹುದ್ದೆಯನ್ನು ಕಡಿಮೆ ಮಾಡಿ, ವ್ಯಕ್ತಿಗತ ನಿರ್ದೇಶಕ ಹುದ್ದೆಯನ್ನು ಹೆಚ್ಚಿಸಲು ಆಡಳಿತ ಮಂಡಳಿ ನಿರ್ಣಯಿಸಿತ್ತು. ಆದರೆ ಸದಸ್ಯರ ಒತ್ತಾಸೆಯಂತೆ ಈ ತಿದ್ದುಪಡಿಯನ್ನು ಸದ್ಯಕ್ಕೆ ಕೈ ಬಿಡಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ಸದಸ್ಯರಿಗೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದೇವೆ, ಎಲ್ಲರೂ ಬೆಂಬಲಿಸಿದರೆ ಅದು ಸಾಧ್ಯ ಎಂದರು.

300x250 AD

ಹಿರಿಯ ಸಹಕಾರಿ, ಹಾಸಣಗಿ ಸೇವಾ ಸಹಕಾರಿ ಸಂಘದ ಆರ್.ಎನ್.ಹೆಗಡೆ ಗೋರ್ಸಗದ್ದೆ ಮಾತನಾಡಿ, ಸೇವಾ ಸಹಕಾರಿ ಸಂಘಗಳ ಪ್ರಾತಿನಿಧ್ಯವನ್ನು ಕಡಿಮೆ ಮಾಡುವುದು ಸಾಧ್ಯವಿಲ್ಲ. ಈಗಾಗಲೇ ಉಮ್ಮಚಗಿ. ಕಳಚೆ ಸಂಘಗಳು ನಮ್ಮಿಂದ ಹೊರ ಹೋಗಿವೆ. ಇದು ಸಂಘದ ಹಿತದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಕಾಲಕ್ಕನುಗುಣವಾಗಿ ಬದಲಾವಣೆ ಮಾಡುವುದಾದರೂ ಪರಿಸ್ಥಿಯನ್ನು ಅವಲೋಕಿಸಿ ಕಾರ್ಯತತ್ಪರರಾಗಬೇಕು ಎಂದರು.

ಉಮ್ಮಚಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗು0ಡಿ, ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಟಿ.ಎಂ.ಎಸ್. ನಿರ್ದೇಶಕರೂ ಆದ ಸುಬ್ಬಣ್ಣ ಬೋಳ್ಮನೆ, ಕಳಚೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್, ಇಡಗುಂದಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಭಟ್ಟ ಬಟ್ಲಗುಂಡಿ, ಸಂಘದ ಸದಸ್ಯರಾದ ಆರ್.ಎಲ್. ಭಟ್ಟ, ಜಿ.ವಿ.ಭಟ್ಟ. ಜಿ.ಕೆ.ಭಟ್ಟ, ಮತ್ತಿತರರು ಸಲಹೆ-ಸೂಚನೆ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ನರಸಿಂಹ ಕೋಣೆಮನೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ಸಿ.ಎಸ್.ಹೆಗಡೆ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ೨೭ ಸದಸ್ಯ ದಂಪತಿಗಳನ್ನು ಸನ್ಮಾನಿಸಲಾಯಿತು.

Share This
300x250 AD
300x250 AD
300x250 AD
Back to top