ಭಟ್ಕಳ: ಕಲೆಯನ್ನು ಕುಟುಂಬದಿAದ ಕುಟುಂಬಕ್ಕೆ ಮುನ್ನಡೆಸಿಕೊಂಡು ಹೋಗುವುದು ಎಷ್ಟು ಮುಖ್ಯವೋ ಅದೇ ರೀತಿ ಅದನ್ನು ಉಳಿಸಿ- ಬೆಳೆಸಿಕೊಂಡು ಹೋಗುವುದು ಸಹ ಅಷ್ಟೇ ಮುಖ್ಯ. ತಾಲೂಕಿನ ಮುರುಡೇಶ್ವರದ ದೇವಿದಾಸ ಗುಡಿಗಾರ, ದಿನೇಶ ಗುಡಿಗಾರ ಹಾಗೂ ಪ್ರದೀಪ ಗುಡಿಗಾರ ಕುಟುಂಬವು ತಮ್ಮ ಅಜ್ಜ, ತಂದೆಯ ಗಣೇಶ ಮೂರ್ತಿ ತಯಾರಿಯ ಕೆಲಸವನ್ನು ಬಿಡದೇ ಅದನ್ನು ಮೊದಲಿನಷ್ಟೇ ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಈ ಹಿಂದೆಯೆಲ್ಲ ಮನೆ ಮನೆಯಲ್ಲಿ ಗಣೇಶ ಕೂರಿಸಿ ಹಬ್ಬದ ವಿಶೇಷ ವೈವಿಧ್ಯಮಯ ಕಜ್ಜಾಯವನ್ನು ತಯಾರಿಸಿ ಹಬ್ಬದ ಸಂಭ್ರಮದ ವಾತಾವರಣವು ಊರಿಗೆ ಮೆರಗು ಹುಟ್ಟಿಸುತ್ತಿತ್ತು. ಈಗ ಬದಲಾದ ಹಬ್ಬದ ಸಂಭ್ರಮದ ನಡುವೆಯು ಗಣೇಶ ಮೂರ್ತಿಯ ತಯಾರಕರಿಗೆ ಅವರ ಕೆಲಸದಲ್ಲಿ ಏನು ಬದಲಾಗಿಲ್ಲ. ಇವರು ಸಿದ್ದಾಪುರದಿಂದ ಮೂರ್ತಿ ತಯಾರಿಕೆಗೆ ಅಗತ್ಯವಾದ ಮಣ್ಣನ್ನು ತಂದು ಸತತ ಎರಡು ತಿಂಗಳುಗಳ ಕಾಲ ಇಬ್ಬರು ಕೆಲಸಗಾರರನ್ನು ಕೆಲಸಕ್ಕಾಗಿ ದುಡಿಯಿಸಿ ಮಣ್ಣು ಹದ ಮಾಡಿ ಆ ಬಳಿಕ ವಿವಿಧ ವಿನ್ಯಾಸ, ಎತ್ತರದ ಗಣೇಶ ಮೂರ್ತಿಯನ್ನು ತಯಾರಿಸುವುದು ಈ ಮುರುಡೇಶ್ವರದ ಗುಡಿಗಾರ ಕುಟುಂಬಕ್ಕೆ ಪ್ರತಿ ವರ್ಷದ ಕಾಯಕವಾಗಿದೆ.
ವರ್ಷದಿಂದ ವರ್ಷಕ್ಕೆ ಗಣೇಶ ಮೂರ್ತಿ ತಯಾರಿಕೆಯ ಅಗತ್ಯ ಮಣ್ಣಿನ ದರ ಗಗನಕ್ಕೆರಿರುವ ಸ್ಥಿತಿಯಲ್ಲಿಯು ಸಹ ಗಣೇಶನನ್ನು ನಂಬಿ ಮೂರ್ತಿ ತಯಾರಿಕೆಯನ್ನು ತಮ್ಮದೇ ಅದ್ಭುತ ಕೈ ಚಳಕದಿಂದ ಮನೆ ಮನೆಯಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವವರಿಗೆ ಸಿದ್ಧಪಡಿಸಿಕೊಡುತ್ತಿದ್ದಾರೆ. ಈ ಗುಡಿಗಾರರ ಕುಟುಂಬವು ಗಣೇಶ ಮೂರ್ತಿಯ ತಯಾರಿಕೆಯ ಜೊತೆಗೆ ಮದುವೆ ಹಾಗೂ ಇನ್ನಿತರ ಶುಭ ಕಾರ್ಯಕ್ರಮದ ವೇದಿಕೆ ಅಲಂಕಾರ ಸೇರಿದಂತೆ ಕಲ್ಲಿನ ಮೂರ್ತಿ ಕೆತ್ತನೆ ಕೆಲಸ ಮಾಡುತ್ತಾರೆ.
ದೇವಿದಾಸ ಗುಡಿಗಾರರು ಹಾಗೂ ಅವರ ಸಹೋದರರು ೫೦ ವರ್ಷದಿಂದ ಕುಟುಂಬದ ಹಿರಿಯ ತಲೆಮಾರಿನವರು ನಡೆಸಿಕೊಂಡು ಬಂದ ಗಣೇಶ ಮೂರ್ತಿ ತಯಾರಿಕೆ ಮುನ್ನಡೆಸಿಕೊಂಡು ಬಂದಿದ್ದು, ಇವರಿಗೆ ಇಬ್ಬರು ಸಹೋದರರಾದ ದಿನೇಶ ಹಾಗೂ ಪ್ರದೀಪ ಗುಡಿಗಾರರು ಸಾಥ್ ನೀಡುತ್ತಾ ಬಂದಿದ್ದಾರೆ. ಈ ವರ್ಷ ೧೫೦ಕ್ಕೂ ಹೆಚ್ಚಿನ ಗಣೇಶ ಮೂರ್ತಿಯನ್ನು ತಯಾರಿಸಿದ ಅವರು ಕಳೆದ ವರ್ಷಕ್ಕಿಂತ ಈ ವರ್ಷ ಎರಡು ಗಣೇಶ ಹೆಚ್ಚಾಗಿ ತಯಾರಿಸಿದ್ದಾರೆ.
ಇವರ ಬಳಿಕ ತಯಾರಾಗುವ ಮಣ್ಣಿನ ಗಣಪತಿಯು ೧ ಅಡಿಯಿಂದ ೭ ಅಡಿಯ ತನಕ ಭಿನ್ನ ವಿಭಿನ್ನ ಶೈಲಿಯಲ್ಲಿ ಕುಳಿತ ಗಣಪತಿ ಸಿದ್ದಪಡಿಸುವ ಇವರು ಇಲ್ಲಿನ ಬಹುತೇಕ ಗಣಪತಿ ಮೂರ್ತಿಗಳು ಶಿರಾಲಿಯ ಜನರು ತೆಗೆದುಕೊಂಡು ಹೋಗಲಿದ್ದಾರೆ. ಕಳೆದ ೪೭ ವರ್ಷದಿಂದ ಇಲ್ಲಿನ ಮುರುಡೇಶ್ವರದ ಓಲಗ ಮಂಟಪದಲ್ಲಿ ಪ್ರತಿಷ್ಠಾಪಿಸುವ ೭ ಅಡಿ ಗಣಪತಿಯನ್ನು ಈ ಗುಡಿಗಾರ ಕುಟುಂಬದವರು ದೇವರ ಸೇವೆಯ ಹಿನ್ನೆಲೆ ಉಚಿತವಾಗಿ ತಯಾರಿಸಿಕೊಡುತ್ತಾ ಬಂದಿದ್ದಾರೆ.