ಕಾರವಾರ: ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಉದ್ಯೋಗ ಸೃಜನ (ಪಿಎಂಇಜಿಪಿ) ಯೋಜನೆಯಡಿ, ನಗರ ಮತ್ತು ಗ್ರಾಮಾಂತರ ಪ್ರದೇಶದ ನಿರುದ್ಯೋಗ ಯುವಕ- ಯುವತಿಯರಿಗೆ ಕೈಗಾರಿಕಾ/ ಸೇವಾ ಚಟುವಟಿಕೆಗಳನ್ನು ಸ್ಥಾಪಿಸಲು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಯೋಜನಾ ವೆಚ್ಚದ ಮೇಲೆ ಶೇಕಡಾ 15ರಿಂದ 35 ರವರೆಗೆ ಮಾರ್ಜಿನ್ ಮನಿ ಸಹಾಯಧನ ಒದಗಿಸಲು ಉದ್ದೇಶಿಸಿ ಗುರಿ ನಿಗದಿಪಡಿಸಲಾಗಿದೆ.
ಈ ಯೋಜನೆಯಲ್ಲಿ ಹೊಸ ಕೈಗಾರಿಕೆ ಉತ್ಪಾದನೆ ಚಟುವಟಿಕೆ ಹಾಗೂ ಆಯ್ದ ಕೆಲವು ಸೇವಾ ಘಟಕ ಸ್ಥಾಪಿಸುವವರಿಗೆ ಅವಕಾಶವಿದ್ದು, ಗರಿಷ್ಠ ಯೋಜನಾ ವೆಚ್ಚ ರೂ.50 ಲಕ್ಷ ಉತ್ಪಾದನೆ ಚಟುವಟಿಕೆಗೆ, ಮತ್ತು ರೂ.20 ಲಕ್ಷ ಆಯ್ದ ಸೇವಾ ಘಟಕಕ್ಕೆ ನೀಡಲಾಗುವುದು. ಅರ್ಜಿದಾರರಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ನಿರುದ್ಯೋಗಿ ಯುವಕ/ಯುವತಿಯರು http://www.kviconline.gov.in/pmegpeportal ವೆಬ್ಸೈಟ್ ಮೂಲಕ ಫೋಟೋ, ಯೋಜನಾ ವರದಿ, ಜಾತಿ ಪ್ರಮಾಣ ಪತ್ರ ಆಧಾರ್ ಕಾರ್ಡ್, ಗ್ರಾಮೀಣ ಪ್ರದೇಶ ಪ್ರಮಾಣ ಪತ್ರ, ವಿದ್ಯಾಭ್ಯಾಸದ ದಾಖಲಾತಿ, ಬ್ಯಾಂಕ್ ಪಾಸ್ ಬುಕ್, ರೇಶನ್ ಕಾರ್ಡ್, ವಾಸ್ತವ್ಯ ಧೃಡೀಕರಣ ಪತ್ರ ಹಾಗೂ ಇತರೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕೆ.ವಿ.ಐ.ಬಿ ಡಾ.ಪಿಕಳೆ ರಸ್ತೆ ಕಾರವಾರ ದೂರವಾಣಿ ಸಂಖ್ಯೆ:tel:+9108382226505, tel:+919480825632ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.