ಗೋಕರ್ಣ: ಜಾಗತೀಕರಣದ ಸಂಭ್ರಮದಲ್ಲಿ ತಂತ್ರಜ್ಞನಾದ ವಿಜಯ ಪತಾಕೆ ಹಿಡಿದು ನಿಂತವರು ನಾವು. ತಾಂತ್ರಿಕ ಶಿಕ್ಷಣದಲ್ಲಿಂದು ಜಗತ್ತು ಬೆರಗಾಗುವಂತೆ ಮುನ್ನಡೆಯುತ್ತಿದ್ದೇವೆ. ಚಂದ್ರಯಾನ-3 ಯಶಸ್ಸಿನಿಂದ ಭಾರತ ವಿಜ್ಞಾನದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಮಾದನಗೇರಿಯ ಮಹಲಸಾ ಸಿದ್ದಿವಿನಾಯಕ ಟೆಂಪಲ್ ಟ್ರಸ್ಟ್ ಧರ್ಮಾಧಿಕಾರಿ ಸುನೀಲ ಪೈ ಹೇಳಿದರು.
ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನಗೋಷ್ಠಿ, ವಿಜ್ಞಾನ ನಾಟಕ ಮತ್ತು ವಿಜ್ಞಾನ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿರೇಗುತ್ತಿ ಗ್ರಾಮ ಪಂಚಾಯತ ಅಧ್ಯಕ್ಷೆ ಶಾಂತಾ ಎನ್. ನಾಯಕ, ಆಡಳಿತ ಮಂಡಳಿಯ ಅಧ್ಯಕ್ಷ ಹೊನ್ನಪ್ಪ ನಾಯಕ, ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ, ಡಯಟ್ ಉಪನ್ಯಾಸಕಿ ಮುಕ್ತಾ ನಾಯಕ, ಆಡಳಿತ ಮಂಡಳಿ ಸದಸ್ಯ ಎನ್.ಟಿ.ನಾಯಕ, ಉದ್ದಂಡ ಬಿ. ಗಾಂವಕರ, ನಾಗರಾಜ ಗಾಂವಕರ, ಜಯಶ್ರೀ ಪಿ., ವೀಣಾ ನಾಯ್ಕ, ರೋಹಿದಾಸ ನಾಯಕ, ಎಂ.ಎಚ್.ನಿಶಾ, ಸಾನಿಕಾ ಜೆ.ನಾಯ್ಕ ಇತರರಿದ್ದರು. ಚೈತನ್ಯ ಸಂಗಡಿಗರು ಪ್ರಾರ್ಥಿಸಿದರು. ಸುವರ್ಣ ಬಂಡಾರಕರ ಸ್ವಾಗತಿಸಿದರು. ಶಿವಪ್ರಸಾದ ನಾಯಕ ನಿರ್ವಹಿಸಿದರು. ಪ್ರೀತಿ ನಾಯಕ ವಂದಿಸಿದರು. ನಂತರ ವಿಜ್ಞಾನ ಗೋಷ್ಠಿ, ವಿಜ್ಞಾನ ವಸ್ತುಪ್ರದರ್ಶನ ನಡೆಯಿತು. ಶಿಕ್ಷಕ ಎನ್. ರಾಮು ಹಿರೇಗುತ್ತಿ ಸಹಕರಿಸಿದರು.