Slide
Slide
Slide
previous arrow
next arrow

ರೂಪಾಲಿ ನಾಯ್ಕ ವಿರುದ್ಧದ ಆಧಾರವಿಲ್ಲದ ಆರೋಪ ಖಂಡನೀಯ: ಸಂಜಯ್ ನಾಯ್ಕ

300x250 AD

ಕಾರವಾರ: ಹಾಲಿ ಶಾಸಕ ಸತೀಶ್ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ವಿರುದ್ಧ ಆಧಾರವಿಲ್ಲದೆ ಆರೋಪ ಮಾಡುತ್ತಿರುವುದು ಖಂಡನೀಯ. ಮಾಜಿ ಶಾಸಕರನ್ನ ತೇಜೋವಧೆ ಮಾಡುವುದೇ ತಮ್ಮ ಕೆಲಸವೆಂದು ಒಂದು ಗುಂಪು ಕಾರ್ಯ ಮಾಡುತ್ತಿದ್ದು, ಇದನ್ನ ನಾವು ಸಹಿಸಲ್ಲ ಎಂದು ಬಿಜೆಪಿ ಅಂಕೋಲಾ ಮಂಡಳಾಧ್ಯಕ್ಷ ಸಂಜಯ್ ನಾಯ್ಕ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಮುಗಿಸಿದ್ದೇವೆ. ಬಿಜೆಪಿ ಸಾಕಷ್ಟು ಸವಾಲುಗಳ ನಡುವೆ ಸಂಘಟನೆ ಮಾಡಿ ಅತ್ಯಲ್ಪ ಮತಗಳ ಅಂತರದಲ್ಲಿ ಅಭ್ಯರ್ಥಿಯನ್ನ ಕಳೆದುಕೊಂಡಿದ್ದೇವೆ. ಹೀಗಾಗಿ ಕಾರವಾರ- ಅಂಕೋಲಾ ಕ್ಷೇತ್ರದ ಕಾರ್ಯಕರ್ತರು ಧೃತಿಗೆಡುವುದು ಬೇಕಿಲ್ಲ. ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದರು.

ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ಮೇಲಿನ ಕಮಿಷನ್ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಅದನ್ನ ಸಾಬೀತು ಮಾಡಲೂ ಆಗಿಲ್ಲ. ಸಣ್ಣ ಸಣ್ಣ ವಿಷಯಗಳನ್ನ ಹಿಡಿದುಕೊಂಡು ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಜನರ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ಚುನಾವಣೆಯಲ್ಲಿ ಸೋತಿದ್ದೇವೆ ಅಷ್ಟೇ, ನಾವ್ಯಾರು ಸತ್ತಿಲ್ಲ. ಎಂತೆoತ ಹೋರಾಟದಲ್ಲಿ ಬಂದoತವರು ನಾವು. ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಮತ್ತೆ ಸಂಘಟನೆ ಮಾಡುತ್ತೇವೆ. ರೂಪಾಲಿ ನಾಯ್ಕರ ನೇತೃತ್ವದಲ್ಲಿ ಸಂಘಟನೆ ಬಲಪಡಿಸುತ್ತೇವೆ ಎಂದರು.

ಅಕ್ಕಿ ವಿಚಾರದಲ್ಲಿ ರಾಜ್ಯ ಸರ್ಕಾರ ಹಣ ಕೊಡುವುದಾಗಿ ಹೇಳಿದೆ. ಚುನಾವಣಾ ಪೂರ್ವ ನೀಡಿದ್ದ ಭರವಸೆಯಂತೆ ಈಗ 10 ಕೆಜಿ ಅಕ್ಕಿಯ ಹಣವನ್ನ ರಾಜ್ಯ ಸರ್ಕಾರ ಪಾವತಿಸಬೇಕು. ಬಿಜೆಪಿ ಜಿಲ್ಲಾಧ್ಯಕ್ಷರಾಗಲು ಅಭ್ಯರ್ಥಿಗಳ ಕೊರತೆ ಇದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಇದು ಸುಳ್ಳು. ನಮ್ಮಲ್ಲಿ ಬೂತ್ ಅಧ್ಯಕ್ಷರಾಗಲು ಕೂಡ ರಾಜ್ಯಾಧ್ಯಕ್ಷರಂತೆಯೇ ಪೈಪೋಟಿ ಇದೆ. ಅವರಿಗೂ ಜವಾಬ್ದಾರಿ ಇದೆ ಎಂದರು.

300x250 AD

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ಮಾತನಾಡಿ, ಹಾಲಿ ಶಾಸಕ ಸತೀಶ್ ಸೈಲ್, ಮಾಜಿ ಸಚಿವ ಆನಂದ್ ಅಸ್ನೋಟಿಕರ್ ನಮ್ಮ ನಾಯಕಿ ರೂಪಾಲಿ ನಾಯ್ಕರ ಮೇಲೆ ಇಲ್ಲಸಲ್ಲದ ಹೇಳಿಕೆ ನೀಡುವುದು, ಟೀಕೆ ಮಾಡುತ್ತಿರುವುದು ಖಂಡನೀಯ. ಎರಡನೇ ಬಾರಿ ಜನ ಅಧಿಕಾರ ಕೊಟ್ಟಿರುವುದು ಟೀಕೆ ಮಾಡಲು ಅಲ್ಲ ಎನ್ನುವುದನ್ನು ಸೈಲ್ ತಿಳಿದುಕೊಳ್ಳಬೇಕು. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದನ್ನ ಬಗೆಹರಿಸಲು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಆಗಲೆಂದು ಕ್ಷೇತ್ರದ ಜನ ಮತ ನೀಡಿದ್ದಾರೆ. ಅದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ರೂಪಾಲಿ ನಾಯ್ಕರ ಮೇಲೆ ಇವರೆಲ್ಲ ಟೀಕೆ ಮಾಡಲೂ ಕಾರಣವಿದೆ. ರೂಪಾಲಿ ನಾಯ್ಕರ ಠೇವಣಿ ತೆಗಿತೀವಿ, ಸೋಲಿಸುತ್ತೇವೆ ಎಂದು ಘಟಾನುಘಟಿ ನಾಯಕರು ಚುನಾವಣೆ ಪೂರ್ವ ಹೇಳಿದ್ದರು. 40 ಸಾವಿರ ಮತಗಳ ಅಂತರದಲ್ಲಿ ಸೋಲಿಸುತ್ತೇವೆ ಎಂದಿದ್ದರು. ಆದರೆ 70 ಸಾವಿರ ಮತ ಪಡೆದು ಕೇವಲ 2 ಸಾವಿರ ಮತಗಳಿಂದ ರೂಪಾಲಿ ನಾಯ್ಕ ಸೋತಿರುವುದು ಅವರಿಗೆ ದಿಗ್ಭ್ರಮೆ ಉಂಟುಮಾಡಿದೆ. ಮುಂದೆ ಕೂಡ ನಮ್ಮ ನಾಯಕಿಯಿಂದ ತೊಂದರೆಯಾಗಬಹುದು ಎಂದು ಅವರನ್ನ ಕುಗ್ಗಿಸಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಟೀಕೆಯಿಂದ ಅವರ ವರ್ಚಸ್ಸು ಹೆಚ್ಚಾಗುತ್ತಿದೆ. ಹೊರತು ಕಡಿಮೆಯಾಗುತ್ತಿಲ್ಲ. ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ, ಜನರ ಸ್ಪಂದನೆ ಇದೆ ಎನ್ನುವುದಕ್ಕೆ ಅವರು ಪಡೆದ ಮತಗಳೇ ಸಾಕ್ಷಿ ಎಂದರು.

ಟೀಕೆ- ಟಿಪ್ಪಣಿ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಸೈಲ್ ಅವರ ರಾಜಕೀಯ ಡೋಲಾಯಮಾನ ಆಗುತ್ತದೆ. ಐದು ಗ್ಯಾರೆಂಟಿ ನೀಡಿ ಅಧಿಕಾರಕ್ಕೆ ಬಂದು ಕಂಡೀಶನ್ ಮೇಲೆ ಕಂಡೀಶನ್ ಹಾಕುತ್ತಿರುವ ಕಾಂಗ್ರೆಸ್ಸಿಗರು ಜನರ ಕೆಲಸ ಮಾಡಲಿ. ಬೆಳಿಗ್ಗಿನಿಂದ ಸಂಜೆಯವರೆಗೆ ಟೀಕೆ- ಟಿಪ್ಪಣಿ ಮಾಡುವುದನ್ನ ಬಿಡಲಿ. ರೂಪಾಲಿ ನಾಯ್ಕ ಪ್ರಶ್ನಾತೀತ ನಾಯಕಿ. ಮುಂದಿನ ದಿನಗಳಲ್ಲಿ ಅವರದ್ದೇ ನೇತೃತ್ವದಲ್ಲಿ ಎಲ್ಲಾ ಚುನಾವಣೆಗಳನ್ನ ಎದುರಿಸುತ್ತೇವೆ. ಅವರ ಕೈ ಬಲಪಡಿಸಿ, ಪಕ್ಷ ಕಟ್ಟುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕಾರವಾರ ನಗರಾಧ್ಯಕ್ಷ ನಾಗೇಶ್ ಕುರ್ಡೇಕರ್, ದತ್ತಾರಾಮ ಬಾಂದೇಕರ್, ಪ್ರದೀಪ್ ಗುನಗಿ, ಸುಜಾತಾ ಬಾಂದೇಕರ್, ಆಶಾ ನಾಯ್ಕ ಮುಂತಾದವರಿದ್ದರು.

Share This
300x250 AD
300x250 AD
300x250 AD
Back to top