ಶಿರಸಿ: ಪ್ರತಿನಿತ್ಯ ನಿಯಮಿತವಾಗಿ ಯೋಗ ಮತ್ತು ಧ್ಯಾನ ಮಾಡುವುದರಿಂದ ನಾವು ದೀರ್ಘಾಯುಷ್ಯರಾಗುತ್ತೇವೆ ಎಂದು ಕಾರ್ಯಕ್ರಮದ ಉದ್ಘಾಟಕರಗಿ ಆಗಮಮಿಸಿದ ವೇದಾ ವೆಲ್ ನೆಸ್ ಸೆಂಟರ್’ನ ಡಾ.ವೆಂಕಟ್ರಮಣ ಹೆಗಡೆ ಹೇಳಿದರು.
ಇಕೋ ಕೇರ್ (ರಿ.), ಶಿರಸಿ, ಶ್ರೀ ಮಹಾಗಣಪತಿ ಯುವಕ ಮಂಡಳಿ, ಹನುಮಗಿರಿ ಶಿರಸಿ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.), ಜಿಲ್ಲಾ ಶಾಖೆ: ಉತ್ತರ ಕನ್ನಡ, ಗ್ರೀನ್ ಕೇರ್, ಶಿರಸಿ, ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ,ಶಿರಸಿ, ಸಹಯೋಗದಲ್ಲಿ ಶಿರಸಿಯ ಹನುಮಗಿರಿಯ ಶ್ರೀ ಸತ್ಯ ಮಾರುತಿ ಮಂದಿರದಲ್ಲಿ ಜೂ.21ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಯೋಗ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಗಣಪತಿ ಯುವಕ ಮಂಡಳಿಯ ಅಧ್ಯಕ್ಷ ಹರೀಶ್ ಪಾಲೇಕರ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ವೇದಾ ವೆಲ್ ನೆಸ್ ಸೆಂಟರ್ ನ ಡಾ. ವೆಂಕಟರಮಣ ಹೆಗಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ್ ಡಿ. ನಾಯಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯರಾದ ಕುಮಾರ ಕೆ.ಬೋರ್ಕರ್, ವಿನಾಯಕ ನಾಯ್ಕ್, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅತಿಥಿಗಳಾಗಿ ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ ತೋನ್ಸೆ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ನ ಕಾರ್ಯದರ್ಶಿಗಳಾದ ಕಿರಣ್ ನಾಯ್ಕ್, ಮಂಜುನಾಥ್ ಪಟಗಾರ್, ರಾಜೇಶ್ ವರ್ಣೇಕರ್ ಭಾಗವಹಿಸಿದ್ದರು. ಶಿಬಿರದಲ್ಲಿ ಯೋಗಗುರು ಗಣಪತಿ ಹೆಗಡೆ ಯೋಗದ ಬಗ್ಗೆ ಮಾಹಿತಿಯನ್ನು ಕೊಟ್ಟು ತರಬೇತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಡಾ.ವೆಂಕಟರಮಣ ಹೆಗಡೆ ಮತ್ತು ಗಣಪತಿ ಹೆಗಡೆಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ರಮೇಶ್ ಬಿ.ನಾಯ್ಕ್, ರಾಜ್ಯ ಔಷಧ ಮಾರಾಟ ಪ್ರತಿನಿಧಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ಅವರು ಕಾರ್ಯಕ್ರಮ ನಿರೂಪಿಸಿದರು. ಇಕೋ ಕೇರ್ ಅಧ್ಯಕ್ಷರಾದ ಸುನೀಲ ಭೋವಿ ವಂದನಾರ್ಪಣೆ ಮಾಡಿದರು.