ಶಿರಸಿ: ಬಸವರಾಜ ಚನ್ನಬಸಪ್ಪ ಕೊಲ್ಲೂರಿ ಚಾರಿಟೇಬಲ್ ಟ್ರಸ್ಟ ಇಸಳೂರು ವತಿಯಿಂದ ತಾಲೂಕಿನ ಇಸಳೂರಿನ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 351 ವಿದ್ಯಾರ್ಥಿಗಳಿಗೆ ತಲಾ 3 ಪಟ್ಟಿಯ ವಿತರಣಾ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್.ಕೆ.ಭಾಗ್ವತ, ದೀಪಕ ಹೆಗಡೆ ದೊಡ್ಡೂರು, ಪ್ರಸನ್ನ ಹೆಗಡೆ, ಟ್ರಸ್ಟನ ಅಧ್ಯಕ್ಷ ದುಶ್ಯಂತರಾಜ ಕೊಲ್ಲೂರಿ, ಪ್ರಭಾಕರರಾವ ಮಂಗಳೂರು ಹಾವೇರಿ ಭಾಗವಹಿಸಿದ್ದರು. ಸಭಾಧ್ಯಕ್ಷತೆಯನ್ನು ಧರ್ಮಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್. ಡಿ. ಹೆಗಡೆ ವಹಿಸಿದ್ದರು. ಗ್ರಾಮೀಣ ಭಾಗದಲ್ಲಿ ಇಂಗ್ಲೀಷ ಮತ್ತು ಕನ್ನಡ ಮಾಧ್ಯಮದಲ್ಲಿ ಉತ್ತಮ ಫಲಿತಾಂಶ ನೀಡುತ್ತಿರುವ ಶಾಲೆಯ ಸಿಬ್ಬಂದಿ ವರ್ಗದವರಿಗೆ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳಿಗೆ ಮುಖ್ಯ ಅತಿಥಿಗಳಾದ ದೀಪಕ ದೊಡ್ಡೂರು ಅಭಿನಂದನೆ ಸಲ್ಲಿಸಿದರು. ಟ್ರಸ್ಟನ ಅಧ್ಯಕ್ಷರಾದ ದುಶ್ಯಂತರಾಜ ಕೊಲ್ಲೂರಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದು ಅಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿವರ್ಷವು ಇಸಳೂರು ಸುತ್ತಮುತ್ತಲಿನ ಪ್ರಾಥಮಿಕ ಶಾಲೆಗಳಿಗೆ ಮತ್ತು ಪ್ರೌಢಶಾಲೆಗಳಿಗೆ ತನ್ನ ಸಹೋದರನ ಹೆಸರಲ್ಲಿ ಉಚಿತ ಪಟ್ಟಿ ವಿತರಿಸುತ್ತಿದ್ದೇವೆಂದು ಹೇಳಿ ಉತ್ತಮ ವ್ಯಾಸಂಗ ಪಡೆಯಲು ವಿದ್ಯಾರ್ಥಿಗಳಿಗೆ ಸೂಚಿಸಿದರು. ಯಾವತ್ತು ಶೈಕ್ಷಣಿಕ ಪ್ರಗತಿಗೆ ಈ ಟ್ರಸ್ಟ ವತಿಯಿಂದ ಸಹಕಾರ ನೀಡುವುದಾಗಿ ತಿಳಿಸಿದರು. ಶಾಲಾಭಿವೃದ್ಧಿ ಸಮಿತಿ ವತಿಯಿಂದ ದುಶ್ಯಂತರಾಜ ಕೊಲ್ಲೂರಿ ಯವರಿಗೆ ಸನ್ಮಾನಿಸಲಾಯಿತು.