Slide
Slide
Slide
previous arrow
next arrow

ಮಹಿಳಾ ಸಮಾನತೆಯಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ: ಪ್ರೊ.ಎಸ್.ವಿ.ಚಿಂಚಣಿ

300x250 AD

ದಾಂಡೇಲಿ: ಮಹಿಳೆ ಜಗತ್ತಿನ ಮೊದಲ ಗುಲಾಮಳು. ಜಗತ್ತಿನ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಬಿಡುಗಡೆ ಮತ್ತು ಸಮಾನತೆ ಇನ್ನು ದೊರೆತಿಲ್ಲ ಎನ್ನುವುದು ವಾಸ್ತವಿಕ. ಮಹಿಳಾ ಸಮಾನತೆಯಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ನಗರದ ಅಂಬೇವಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಎಸ್.ವಿ.ಚಿಂಚಣಿ ಅಭಿಪ್ರಾಯಿಸಿದರು.

ಅವರು ಶನಿವಾರ ನಗರದ ಅಂಬೇವಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಘದ ಆಶ್ರಯದಡಿ ಡಾ.ವಿನಯಾ ಜಿ.ನಾಯಕ ನಿರ್ದೇಶನದಲ್ಲಿ ಆರಂಭವಾದ ಮಹಿಳಾ ಅಧ್ಯಯನ ಸರ್ಟಿಫಿಕೆಟ್ ಕೋರ್ಸನ್ನು ಉದ್ಘಾಟಿಸಿ ಮಾತನಾಡಿದರು.

300x250 AD

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕುಂದ, ಲಿಂಗ ಸೂಕ್ಷ್ಮ ದೃಷ್ಟಿಕೋನ ಎಲ್ಲರಿಗೂ ಸಾಧ್ಯವಾಗಬೇಕು. ಆಗ ಮಾತ್ರ ಸಮಾಜ ಸಮಾಜ ನಿರ್ಮಾಣವಾಗುತ್ತದೆ. ಮಹಿಳಾ ಅಧ್ಯಯನ ಸರ್ಟಿಫಿಕೆಟ್ ಕೋರ್ಸ್ ಅಂಥಹ ದೃಷ್ಟಿಯನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೀಡುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ.ಬಿ.ಎನ್.ಅಕ್ಕಿ, ಡಾ.ಎನ್.ಎಂ.ಜಂಗೂಬಾಯಿ, ಪ್ರೊ.ತಸ್ಲೀಮಾ ಜೋರುಂ, ಉಷಾ ನಾಯಕ, ಬಸವರಾಜ ಮೊದಲಾದವರು ಉಪಸ್ಥಿತರಿದ್ದರು. ಕಾವ್ಯ ಭಟ್ ಪ್ರಾರ್ಥನೆ ಹಾಡಿದರು. ಲಕ್ಷ್ಮೀ ಪಾಟೀಲ್ ಸ್ವಾಗತಿಸಿದ ಕಾರ‍್ಯಕ್ರಮಕ್ಕೆ ಪಿ.ಭಾರ್ಗವಿ ವಂದಿಸಿದರು. ಸುಶ್ಮಿತಾ.ಎಸ್ ಕಾರ‍್ಯಕ್ರಮವನ್ನು ನಿರೂಪಿಸಿದರು.

Share This
300x250 AD
300x250 AD
300x250 AD
Back to top