ಶಿರಸಿ : ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹತ್ತಾರು ಒಳ್ಳೆಯ ಧ್ಯೆಯೋದ್ದೇಶಗಳನ್ನು ಹೊಂದಿಕೊoಡು ಇಲ್ಲಿನ “ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರ (ರಿ) ಶಿರಸಿ ತನ್ನ ವಾರ್ಷಿಕ ಸಂಗೀತ ಸಮಾರೋಹ ಕಾರ್ಯಕ್ರಮವನ್ನು ಸಂಘಟಿಸಿದೆ. ಎಪ್ರಿಲ್ 16 ಭಾನುವಾರ ಬೆಳಗ್ಗೆ 10 ಘಂಟೆಯಿoದ ಆರಂಭಗೊಳ್ಳುವ ಕಾರ್ಯಕ್ರಮ ಸಂಜೆ 8 ಘಂಟೆಯವರೆಗೆ ನಡೆಯಲಿದೆ. ಇದೇ ಪ್ರಪ್ರಥಮ ಬಾರಿಗೆ ಸಂಗೀತ ಸಮಾರೋಹ ಅಂಗವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಮೂಹ ಖ್ಯಾತ ಗಾಯನ ಸ್ಪರ್ಧೆಯನ್ನು ಶಿರಸಿ ತಾಲೂಕಾ ಮಟ್ಟದಲ್ಲಿ ಏರ್ಪಡಿಸಲಾಗಿದ್ದು ಅಂದು ಬೆಳಗ್ಗೆ 10.30 ರಿಂದ ಆರಂಭಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಪ್ರೊ. ಎನ್.ವಿ.ಜಿ. ಭಟ್, ಲಯನ್ಸ್ ಕಾರ್ಯದರ್ಶಿ ಪ್ರೊ. ರವಿ ನಾಯಕ, ಲ. ಲೋಕೇಶ ಹೆಗಡೆ ಪ್ರಗತಿ ಟ್ರೇಡರ್ಸ, ಶಿರಸಿ, ಟಿ.ಎಸ್.ಎಸ್. ನಿರ್ದೇಶಕ ಸೀತಾರಾಮ್ ಹೆಗಡೆ ನೀರ್ನಳ್ಳಿ, ಯಕ್ಷಕಲಾವಿದ ಹಾಗೂ ಉಪನ್ಯಾಸಕ ವಿ. ದತ್ತಮೂರ್ತಿ ಭಟ್, ಆರೋಹಿ ಸಂಸ್ಥೆಯ ಉಪಾಧ್ಯಕ್ಷ ಸಿ.ಎಸ್. ನಾರಾಯಣ ದೇಸಾಯಿ ಬೆಂಗಳೂರು, ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಹರೀಶ ಹೆಗಡೆ ಮತ್ತು ಹಿರಿಯ ಸಂಗೀತ ವಿದ್ವಾಂಸ ವಿ. ದತ್ತಾತ್ರೇಯ ಗಾಂವಕರ್ ಚಿಟ್ಟೆಪಾಲ್ ರವರು ಪಾಲ್ಗೊಳ್ಳಲಿದ್ದಾರೆ.
ಸಮೂಹ ಖ್ಯಾಲ್ ಗಾಯನ ಸ್ಪರ್ಧೆಯ ನಂತರ ಆರೋಹಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ನಡೆಯಲಿದ್ದು, ನಂತರದಲ್ಲಿ ಶಿಕ್ಷಕಿ ದೀಪಾ ಶಶಾಂಕ ಹೆಗಡೆಯವರ ಗಾಯನ, ತದನಂತರದಲ್ಲಿ ಆಹ್ವಾನಿತ ಕಲಾವಿದರಾದ ಡಾ.ಹರೀಶ ಹೆಗಡೆಯವರಿಂದ ಸಂಗೀತ ಕಚೇರಿ ನಡೆಯಲಿದ್ದು, ತಬಲಾದಲ್ಲಿ ಗಣೇಶ ಗುಂಡ್ಕಲ್ ಮತ್ತು ಅಭಿಷೇಕ ಮುರ್ಡೇಶ್ವರ ಹಾಗೂ ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ ಸಹಕರಿಸಲಿದ್ದಾರೆ.
ಗಾಯನ ನಂತರದಲ್ಲಿ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳಬೇಕೆಂದು ಆರೋಹಿ ಸಂಸ್ಥೆಯ ಅಧ್ಯಕ್ಷ ಶಶಾಂಕ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.