ಜೊಯಿಡಾ: ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಹಿಂಭಾಗದಲ್ಲಿ ಇರುವ ಸ್ತ್ರೀ ಶಕ್ತಿ ಭವನ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.
2019ರಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಈ ಕಟ್ಟಡವನ್ನು ನಿರ್ಮಿಸಲಾಗಿದ್ದು, ಸದ್ಯ ಕಟ್ಟಡ ಮುಂಭಾದಲ್ಲಿ ಹಾಕಿದ ಟೈಲ್ಸ್ಗಳು ಕಿತ್ತಿವೆ. ಮಳೆಗಾಲದಲ್ಲಿ ಕಟ್ಟಡ ಸೋರುತ್ತದೆ. ವಿದ್ಯುತ್ ಕನೆಕ್ಷನ್ ಸರಿಯಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.
ಇದೇ ಸ್ತ್ರೀಶಕ್ತಿ ಭವನದಲ್ಲಿ ಎರಡು ದಿನಗಳ ಹಿಂದೆ ಶಾಸಕ ಆರ್.ವಿ.ದೇಶಪಾಂಡೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಕ್ರಮವೊಂದಕ್ಕೆ ಬಂದಾಗ ಕಟ್ಟಡದ ಪರಿಸ್ಥಿತಿ ನೋಡಿ ಯಾರು ಈ ಕಟ್ಟಡದ ಕಾಮಗಾರಿ ಮಾಡಿದ್ದು? ಕೊಟ್ಟ ಅನುದಾನವನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ ಏಕೆ? ಕಳಪೆ ಕಾಮಗಾರಿ ಮಾಡಿ ಜನರಿಗೆ ಮೋಸ ಮಾಡಬೇಡಿ ಎಂದು ಗರಂ ಆಗಿದ್ದರು.