Slide
Slide
Slide
previous arrow
next arrow

ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ರಾಜ್ಯ, ಕೇಂದ್ರ ಸರಕಾರ ಸಂಪೂರ್ಣ ವಿಫಲ: ರವೀಂದ್ರ ನಾಯ್ಕ

300x250 AD

ಕುಮಟ: ಅರಣ್ಯವಾಸಿಗಳು ಅರಣ್ಯ ಹಕ್ಕಿನಿಂದ ವಂಚಿತರಾಗಲು ಜನಪ್ರತಿನಿಧಿಗಳ ವಿರೋಧ ನಿತಿಯೇ ಕಾರಣ. ಅರಣ್ಯ ಹಕ್ಕು ಮಂಜೂರಿಗೆ ಸಂಬಂಧಿಸಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಅರಣ್ಯವಾಸಿಗಳು ಅತಂತ್ರವಾಗುವ ಸ್ಥಿತಿಗೆ ಬಂದೊದಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರ ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

 ಅವರು ತಾಲೂಕಿನ ಮಹಾಸತಿ ಸಭಾಂಗಣದಲ್ಲಿ ಜರುಗಿದ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಉದ್ದೇಶಿಸಿ ಮೇಲಿನಂತೆ ಮಾತನಾಡಿದರು.

 ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು ಇಂದು ಅರಣ್ಯವಾಸಿಗಳ ಪರವಾಗಿ ನೀತಿ ರೂಪಿಸದೇ ಸರಕಾರದ ನಿರ್ಲಕ್ಷ್ಯ ಭಾವನೆಯಿಂದ ಅರಣ್ಯ ಭೂಮಿ ಹಕ್ಕಿನಿಂದ ಅರಣ್ಯವಾಸಿಗಳು ವಂಚಿತರಾಗುವ ಪ್ರಸಂಗ ಬಂದೊದಗಿದೆ. ಮುಂಬರುವ ಚುನಾವಣೆಯಲ್ಲಿ ಅರಣ್ಯವಾಸಿಗಳ ವಿರೋಧ ನೀತಿ ಅನುಸರಿಸಿದ ಜನಪ್ರತಿನಿಧಿಗಳಿಗೆ ಸೂಕ್ತವಾಗಿ ಉತ್ತರ ನೀಡಲಾಗುವುದೆಂದು ಅವರು ಹೇಳಿದರು.

300x250 AD

 ಸಭೆಯಲ್ಲಿ ಸೀತಾರಾಮ ನಾಯ್ಕ ಬೊಗ್ರಿಬೈಲ್, ಯಾಕೂಬ್ ಬೇಟ್ಕುಳಿ, ಲಕ್ಷ್ಮಣ್ ಮಾಳ್ಳಕ್ಕನವರ, ಸಾರಂಬಿ ಶೇಖ್, ರಾಜು ಗೌಡ, ಇಸಾಕ್ ಕಿಮಾನಿ, ರಾಮಚಂದ್ರ ಪಟಗಾರ, ಗಣಪತಿ ಹೆಗಡೆ, ಜ್ಯೋತಿ ಗಾವಡಿ, ಶಂಕರ ಹನುಮಂತ ಗೌಡ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top