ಕಾರವಾರ: ಜಿಲ್ಲೆಯ ಗೋಕರ್ಣದಿಂದ ಪ್ರಾರಂಭವಾಗಿ ವಡ್ಡಿ ದೇವನಹಳ್ಳಿ ಮುಖಾಂತರ ಶಿರಸಿ ತಾಲೂಕು ಸಂಪರ್ಕಿಸುವ ರಾಜ್ಯ ಹೆದ್ದಾರಿ-143 ನೇದರ 38 ಕಿ.ಮೀ.ನಿಂದ 47.15 ಕಿ.ಮೀ.ವರೆಗಿನ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ ಸದರಿ ರಸ್ತೆ ಮಾರ್ಗವಾಗಿ ಸಂಚರಿಸುವ ಎಲ್ಲ ತರಹದ ವಾಹನಗಳ ಸಂಚಾರವನ್ನು ಮುಂದಿನ 2 ತಿಂಗಳ ಅವಧಿಗೆ ನಿಷೇಧಿಸಿದ್ದಾರೆ.
ವನ್ಯಪ್ರಾಣಿ ಜೀವಿ ಸಂಕುಲಗಳಿಗೆ ಧಕ್ಕೆಯಾಗದಂತೆ ಸೂಕ್ತ ಸಂಚಾರಿ ನಿಯಮಗಳನ್ನು ಪಾಲಿಸಿ ಅಂಕೋಲಾದಿಂದ ಶಿರಸಿಗೆ ಸಂಚರಿಸಲು ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63ರ ಮೂಲಕ ಯಲ್ಲಾಪುರದಿಂದ ಶಿರಸಿ, ಅಂಕೋಲಾ ರಾಷ್ಟ್ರೀಯ ಹೆದ್ದಾರಿ-66ರ ಮೂಲಕ ಮಿರ್ಜಾನ ಮಾರ್ಗವಾಗಿ ಶಿರಸಿ, ಅಂಕೋಲಾದಿಂದ ಶಿರಿಸಿಗೆ ಸಂಚರಿಸಲು ಅಂಕೋಲಾ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಮಿರ್ಜಾನ ಕತಗಾಲ ಮಾರ್ಗವಾಗಿ ಯಾಣಕ್ಕೆ ಹಾಗೂ ಶಿರಸಿಯಿಂದ ಯಾಣಕ್ಕೆ ಸಂಚರಿಸಲು ಶಿರಸಿ ದೇವನಳ್ಳಿ ಮಾರ್ಗವಾಗಿ ಯಾಣಕ್ಕೆ, ಶಿರಸಿ ದೇವಿಮನೆ ಘಾಟ್ ಮಾರ್ಗವಾಗಿ ಯಾಣಕ್ಕೆ ಪಥ ಬದಲಾಯಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.