ಕಾರವಾರ: ನಗರದ ದಿವೇಕರ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಹಿಂದು ಹೈಸ್ಕೂಲ್‌ನ ಮುಖ್ಯಾಧ್ಯಾಪಕ ಅರುಣ ಪಿ.ರಾಣೆ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವುದರ ಜೊತೆಯಲ್ಲಿ ಸಂಸ್ಕಾರಯುತವಾಗಿ ಬದುಕುವುದನ್ನು ಕಲಿಯಬೇಕು.ಪ್ರತಿಯೊಬ್ಬರೂ ಕಾಯಕವೇ ಕೈಲಾಸ ಎನ್ನುವ ಹಾಗೆ ಶ್ರಮಪಟ್ಟು ಓದಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ದಿವೇಕರ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲಲಿತಾ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಸಮೀಪಿಸುವುದರಿಂದ ಓದಿನ ಕಡೆ ಗಮನ ಹರಿಸಬೇಕಾಗಿದೆ ಎಂದರು.
ಸಂಪ್ರೀತಾ ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಹಾಡಿದರು.
ಫರ್ಜಿನ್ ಮುಲ್ಲಾ ಸ್ವಾಗತಿಸಿ. ರಾಜೇಶ ಮರಾಠಿ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಾಂಶುಪಾಲರಾದ ಲಲಿತಾ ಶೆಟ್ಟಿ ವಾಚಿಸಿದರು. ಸಾಂಸ್ಕೃತಿಕ ಹಾಗೂ ಕ್ರೀಡಾ ಬಹುಮಾನದ ವರದಿಯನ್ನು ಪೂಜಾ ನಾಯ್ಕ ವಾಚಿಸಿದರು. ಡಯಾನಾ ರೂಜಾರಿಯೋ ವಂದಿಸಿದರು. ಪ್ರಿಯಾಂಕಾ ನಾಯ್ಕ ನಿರೂಪಿಸಿದರು.