ಕುಮಟಾ: ತಾಳ್ಮೆ, ಸಮರ್ಪಣೆ ನಿರ್ಣಯಗಳ ಗುಣವುಳ್ಳ ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತಾನೆ. ಈ ದಿಶೆಯಲ್ಲಿ ವಿದ್ಯಾರ್ಥಿಗಳು ಸತತ ಪರಿಶ್ರಮಪಡಬೇಕು ಎಂದು ಶ್ರೀರಾಮ ಸ್ಟಡಿ ಸರ್ಕಲ್ ನಿರ್ದೇಶಕ ಸೂರಜ ನಾಯಕ ಹೇಳಿದರು.
ಅವರು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಕಾಮರ್ಸ್ ಅಸೋಸಿಯೇಶನ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ವ್ಯಕ್ತಿತ್ವ ವಿಕಸನ’ ಕುರಿತು ಉಪನ್ಯಾಸ ನೀಡಿದರು.
ಉದ್ಘಾಟಕರಾಗಿ ಆಗಮಿಸಿದ್ದ ನಗರದ ಪ್ರಸಿದ್ಧ ಉದ್ದಿಮೆದಾರ ಜಿ.ಐ.ಹೆಗಡೆ ಮಾತನಾಡುತ್ತ, ನಾವು ಉದ್ಯೋಗ ಅರಸುತ್ತ ಶಹರಗಳಿಗೆ ಹೋಗುವ ಬದಲು ನಾವೇ ಉದ್ಯೋಗ ಕೊಡುವಂತಾಗಬೇಕು ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಜಾವಾಣಿ ವರದಿಗಾರ ಎಂ.ಜಿ.ನಾಯ್ಕ, ನಗರದಲ್ಲಿರುವ ಕಾಲೇಜುಗಳಿಗೆ ಸ್ಟಾರ್ ಸಿಗುವುದು ಆ ಕಾಲೇಜುಗಳಲ್ಲಿಯ ಹತ್ತು ಹಲವು ಸಂಘಟನೆಗಳಿoದ. ಇಂತಹ ಸಂಘಟನೆಗಳು ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿರುಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಚಾರ್ಯರಾದ ಡಾ.ವಿಜಯಾ ಡಿ.ನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಮರ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಗೀತಾ ನಾಯಕ ಕಾಮರ್ಸ್ ಅಸೋಶಿಯೇಶನ್ ಧ್ಯೇಯೋದ್ದೇಶಗಳನ್ನು ಸಭೆಗೆ ಪರಿಚಯಿಸಿದರು. ಪ್ರಾಧ್ಯಾಪಕಿ ರಮ್ಯಾ ಆತ್ಮೀಯವಾಗಿ ಸ್ವಾಗತಿಸಿದರೆ, ಪ್ರಾಧ್ಯಾಪಕ ಈಶ್ವರ ಗೌಡರವರು ನಿರ್ವಹಿಸಿದರು.