ಶಿರಸಿ: ಉತ್ತರ ಕನ್ನಡಜಿಲ್ಲೆಯ ಪ್ರತಿಯೊಂದು ಮನೆಯಲ್ಲೂ ಕಲಾವಿದರಿದ್ದಾರೆ ಅವರನ್ನು ಗುರುತಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಹೇಳಿದರು.
ಅವರು ಸಿದ್ದಾಪುರ ತಾಲೂಕಿನ ಶೀಗೆಹಳ್ಳಿಯಲ್ಲಿ ಯಕ್ಷಗಾನ ಅಕಾಡೆಮಿ, ಸೇವಾ ರತ್ನ ಮಾಹಿತಿ ಕೇಂದ್ರ ಕಾನಸೂರು ಹಾಗೂ ಕಲ್ಲೇಶ್ವರ ಯಕ್ಷಗಾನ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹಿರಿಯರ ನೆನಪು ದಿ.ವೆಂಕಟಾಚಲ ಭಟ್ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ಘನತೆ ಗೌರವವಿದೆ. ವೆಂಕಟಾಚಲ ಭಟ್ ಯಕ್ಷಗಾನ ಕ್ಷೇತ್ರದ ಮೇರು ಕಲಾವಿದರು.ಯಕ್ಷಗಾನ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.
ಬಾಳಿಗಾ ಕಾಲೇಜು ದೈಹಿಕ ನಿರ್ದೇಶಕ ಜಿಡಿ ಭಟ್ ಶೀಗೆಹಳ್ಳಿ ಮಾತನಾಡಿ ವೆಂಕಟಾಚಲ ಭಟ್ಟ ಕಲಾ ಬೀಜವನ್ನು ಬಿತ್ತಿದ್ದಾರೆ. ಅದನ್ನು ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆತ್ಮೀಯತೆ ತುಂಬಿದ ಊರು ಶೀಗೆಹಳ್ಳಿ ಇಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಕ್ಕೂ ತನ್ನದೇ ಆದ ವಿಶಿಷ್ಟ ವಿದೆ ಎಂದರು.
ಪ್ರಸಿದ್ದ ಹಿರಿಯ ಮೃದಂಗ ವಾದಕ ಶ್ರೀಪತಿ ಹೆಗಡೆ ಕಂಚಿಮನೆ ಅವರನ್ನು ಸಮ್ಮಾನಿಸಲಾಯಿತು. ಕಾರ್ತಿಕ ಹೆಗಡೆ ಪ್ರಾರ್ಥಿಸಿದರು. ತ್ರಯಂಬಕ ಹೆಗಡೆ ಸ್ವಾಗತಿಸಿದರು. ಸೇವಾ ರತ್ನ ಮಾಹಿತಿ ಕೇಂದ್ರ ಕಾನಸೂರಿನ ಸಂಚಾಲಕ ರತ್ನಾಕರ ಭಟ್ ಪ್ರಾಸ್ತಾವಿಕ ಮಾತನಾಡಿದರು.
ನಾಗಪತಿ ಹೆಗಡೆ ಶೀಗೆಹಳ್ಳಿ ಹಾಗೂ ರಘುಪತಿ ಹೆಗಡೆ ದೇವಿಸರ ಗುರುಸ್ಮರಣೆ ಸಲ್ಲಿಸಿದರು. ತ್ಯಾಗಲಿ ನಾಣಿಕಟ್ಟಾ ಗ್ರಾಪಂ ಅಧ್ಯಕ್ಷ ಲಕ್ಷ್ಮಿ ನಾರಾಯಣ ಹೆಗಡೆ ಹುಡ್ಲಮನೆ ಸಾಂದರ್ಭಿಕ ಮಾತನ್ನಾಡಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಸನ್ನ ಹೆಗಡೆ ನೇರ್ಲಮನೆ ಉಪಸ್ಥಿತರಿದ್ದರು. ವಸುಧಾ ಹೆಗಡೆ ಶೀಗೆಹಳ್ಳಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ನಂತರ ಶ್ರೀ ರಾಮ ಪರಂಧಾಮ ತಾಳಮದ್ದಳೆ ನಡೆಯಿತು. ಭಾಗವತರಾಗಿ ಗಜಾನನ ಭಟ್ಟ ತುಳಗೆರೆ, ವಿರುಪಾಕ್ಷ ಹೆಗಡೆ ಶೀಗೆಹಳ್ಳಿ, ಮೃದಂಗ ವಾದಕರಾಗಿ ಶ್ರೀಪತಿ ಹೆಗಡೆ ಕಂಚಿಮನೆ, ಅರ್ಥಧಾರಿಗಳಾದ ಸುಬ್ರಾಯ ಹೆಗಡೆ ಕೆರೆಕೊಪ್ಪ ,ನಿರ್ಮಲಾ ಹೆಗಡೆ ಗೋಳಿಕೊಪ್ಪ, ವಿ ರಾಮಚಂದ್ರ ಭಟ್ಟ ಶಿರಳಗಿ, ರತ್ನಾಕರ ಭಟ್ಟ ಕಾನಸೂರ ಚಂದ್ರಶೇಖರ ಹೆಗಡೆ ಮಾದ್ನಕಳ್ಳ ,ಆನಂದ ಶೀಗೆಹಳ್ಳಿ ಭಾಗವಹಿಸಿದ್ದರು.