ಕಾರವಾರ: ಸಮೀಪದ ಸಿದ್ದರ ಮಲ್ಲಿಜಾರ್ಜುನ ಪದವಿಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯರಾಗಿ ಡಿ.ಆರ್.ನಾಯ್ಕ್ ಅಧಿಕಾರ ಸ್ವೀಕಾರ ಮಾಡಿದರು.
ಉಲ್ಲಾಸ ಎಸ್.ನಾಯ್ಕ್ ರವರ ವಯೋನಿವೃತ್ತಿಯಿಂದ ಖಾಲಿಯಾದ ಪ್ರಾಚಾರ್ಯ ಹುದ್ದೆಗೆ ಡಿ.ಆರ್.ನಾಯ್ಕ್ ಪದಗ್ರಹಣ ಮಾಡಿ ಮಾತನಾಡುತ್ತ, ಮಹಾವಿದ್ಯಾಲಯದ ಯಾವತ್ತೂ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ವ್ಯಕ್ತಿತ್ವದ ವಿಕಾಸಕ್ಕೆ ಹೆಚ್ಚಿನ ಗಮನ ನೀಡಿಅಭಿವೃದ್ಧಿಯಲ್ಲಿ ಹಿಂದಿನ ಪರಂಪರೆ ಮುಂದುವರೆಸುವದಾಗಿ ಪ್ರಾಮಾಣಿಕ ಭರವಸೆ ನೀಡುವದಾಗಿ ಹೇಳಿದರು.
ಡಿ.ಆರ್.ನಾಯ್ಕ್ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಧಾರವಾಡ ಇದರ ಕಾರ್ಯಧ್ಯಕ್ಷರಾಗಿ 2008ರಿಂದ ಸೇವೆ ಸಲ್ಲಿಸುವದರ ಮೂಲಕ ಬೋಧಕ- ಬೋಧಕೇತರ ನೌಕರರ ಬೇಡಿಕೆಗಳ ಸಮಸ್ಯೆಗಳಿಗೆ ಸ್ಪಂದಿಸಿ ಹಲವಾರು ಹೋರಾಟಗಳಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಆ ಮೂಲಕ ನೌಕರರೊಂದಿಗೆ ಸ್ನೇಹ ಜೀವಿಯಾಗಿದ್ದಾರೆ. ಸಮಾಜ ಶಾಸ್ತ್ರ ವಿಷಯ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾಗಿಯು ಕಾರ್ಯನಿರ್ವಹಿಸುತ್ತಿದ್ದಾರೆ. ಕಾರವಾರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ನ ಆಹ್ವಾನಿತಾ ಸದಸ್ಯರಾಗಿ ಕನ್ನಡ ನಾಡು, ನುಡಿ, ಸಂಸ್ಕೃತಿ ಯ ಕಾರ್ಯಕ್ರಮಗಳಲ್ಲಿಯೂ ತನ್ನನು ತಾನು ತೊಡಗಿಸಿಕೊಂಡಿದ್ದಾರೆ. ಸಮಾಜ ಶಾಸ್ತ್ರ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಾಹಿಸಿದ್ದಾರೆ. ಹೀಗೆ ಹಲವಾರು ಕ್ಷೆತ್ರಗಳಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ. ಸಾಮಾಜಿಕ, ಸಾಂಸ್ಕೃತಿಕ ಅಂಗಗಳಲ್ಲಿಕಾಣಿಸಿಕೊAಡಿದ್ದಾರೆ. ಇಂತಹ ಬಹುಮುಖ ವ್ಯಕ್ತಿತ್ವದ ಶ್ರೀಯುತರ ಅಧಿಕಾರ ಅವಧಿಯಲ್ಲಿ ಮಹಾವಿದ್ಯಾಲಯದ ಶ್ರೇ ಯೋಭಿವೃದ್ಧಿ ಯಾಗಲೆಂದು ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿದ ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ಆರ್.ನಾಯ್ಕ್ ಹಾರೈಸಿದರು.
ಸಮಾರಂಭದ ವೇದಿಕೆಯಲ್ಲಿ ಮಲ್ಲಿಕಾರ್ಜುನ ಪ್ರೌಢಶಾಲೆ, ಬಾಲಕಿಯರ ಪ್ರೌಢಶಾಲೆ ಹೆಡ್ ಮಾಸ್ಟರ್ ಆದ ಜಿ.ಎಸ್.ಪಾಟೀಲ್, ಪ್ರಭಾ ರಾಣೆ, ಸಿದ್ದರ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಂದ್ರ ರಾಣೆ, ಗಿರೀಶ್ ನಾಯ್ಕ್, ನಿಕಟಪೂರ್ವ ಪ್ರಚಾರ್ಯರಾದ ಉಲ್ಲಾಸ ಎಸ್ ನಾಯ್ಕ್,ಕೈಗಾರಿಕಾ ತರಬೇತಿ ಕೇಂದ್ರದ ತರಬೇತಿ ಅಧಿಕಾರಿಯಾದ ಸಂತೋಷ್ ನಾಯ್ಕ್ ಉಪನ್ಯಾಸಕರಾದ ಜಿ.ಡಿ.ಮನೋಜ್, ಪ್ರಶಾಂತ್ ರಾಣೆ, ಅರ್ಚನಾ ರಾಣೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಾದ ಕೆ.ಜಿ.ಶಿಂಧೆ, ರವಿ ನಾಯ್ಕ್, ವಿನೋದ ಹಾಗೂ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀಯುತರನ್ನು ಗೌರವಯುತವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.