Slide
Slide
Slide
previous arrow
next arrow

ಸೀಬರ್ಡ್, ಹೆಸ್ಕಾಂ ಪ್ರಕರಣದಲ್ಲಿ ಜಪ್ತಿಗೆ ಆದೇಶಿಸಿದ್ದ ಕೋರ್ಟ್: ಪೀಠೋಪಕರಣ ವಾಪಸ್

300x250 AD

ಕಾರವಾರ: ನಗರದ ಸೀಬರ್ಡ್ ನೌಕಾನೆಲೆ ಹಾಗೂ ಹೆಸ್ಕಾಂ ಗ್ರಿಡ್ ಸ್ಥಾಪನೆಗಾಗಿ ಭೂಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಮಾಲೀಕರಿಗೆ ಹೆಚ್ಚುವರಿ ಪರಿಹಾರ ನೀಡದ್ದಕ್ಕೆ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಪೀಠೋಪಕರಣಗಳನ್ನ ಕೋರ್ಟ್ನಿಂದ ಜಪ್ತಿಪಡಿಸಿಕೊಂಡು, ಬಳಿಕ ವಾಪಸ್ಸು ತಂದಿಡಲಾಗಿದೆ.

ಅರಗಾದಲ್ಲಿನ ಶೀಲಾ ದಂಡೇಕರ್ ಎನ್ನುವವರ ಒಂದು ಎಕರೆ ಕೃಷಿ ಜಮೀನನ್ನ ಸೀಬರ್ಡ್ ಯೋಜನೆಗಾಗಿ 1986ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. 25 ಲಕ್ಷ ರೂ. ಪರಿಹಾರದ ಮೊತ್ತದಲ್ಲಿ ಅಂದು 21 ಲಕ್ಷ ಪರಿಹಾರವನ್ನ ಸೀಬರ್ಡ್ ವಿಶೇಷ ಭೂಸ್ವಾಧೀನಾಧಿಕಾರಿಗಳು ಪಾವತಿಸಿದ್ದರು. ಆದರೆ ಸುಮಾರು 4 ಲಕ್ಷ ರೂ. ಟಿಡಿಎಸ್ ಅನ್ನು ಪರಿಹಾರದ ಹಣದಲ್ಲಿ ಕಡಿತ ಮಾಡಿಕೊಳ್ಳಲಾಗಿತ್ತು.

ಇನ್ನೊಂದು ಪ್ರಕರಣದಲ್ಲಿ, ಹೆಸ್ಕಾಂ ಗ್ರಿಡ್ ನಿರ್ಮಾಣಕ್ಕೆ ಶಿರವಾಡ ಗ್ರಾಮದ ಸಂತೋಷ ನಾಯ್ಕ ಎನ್ನುವವರ ಕೃಷಿ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಇವರ ಪರಿಹಾರದಲ್ಲೂ ಕಡಿತ ಮಾಡಿಕೊಂಡಿದ್ದ ಹಣ ಹಾಗೂ ಬಡ್ಡಿ ಸೇರಿ 10 ಲಕ್ಷ ರೂ.ಗಳನ್ನು ಈವರೆಗೆ ಪಾವತಿಸಿರಲಿಲ್ಲ. ಈ ಬಗ್ಗೆ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಅದರಂತೆ ಹೆಚ್ಚುವರಿ ಪರಿಹಾರ ಪಾವತಿಸಲು ಕೋರ್ಟ್ ಆದೇಶವಿದ್ದರೂ ವಿಳಂಬ ಮಾಡುತ್ತಿರುವುದಕ್ಕೆ ಕೋರ್ಟ್ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಹಾಗೂ ಕೆಪಿಟಿಸಿಎಲ್ ಕಚೇರಿಯ ಕಾರು ಸೇರಿದಂತೆ ಪೀಠೋಪಕರಣಗಳನ್ನ ಜಪ್ತಿ ಮಾಡಿಕೊಳ್ಳಲು ಆದೇಶಿಸಲಾಗಿತ್ತು. ಅದರಂತೆ ಕೋರ್ಟ್ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ, ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಪೀಠೋಪಕರಣಗಳನ್ನ ಕೋರ್ಟ್ಗೆ ಕೊಂಡೊಯ್ದಿದ್ದಾರೆ. ಆದರೆ, ನಂತರದಲ್ಲಿ ನಡೆದ ಬೆಳವಣಿಗೆಯಲ್ಲಿ ಪೀಠೋಪಕರಣಗಳನ್ನು ವಾಪಸ್ಸು ತಂದಿಡಲಾಗಿದೆ.

300x250 AD

ಪರಿಹಾರ ನೀಡಲಾಗಿದೆ: ಎಸಿ: ನೌಕಾನೆಲೆ ಯೋಜನೆಗೆ ಭೂಸ್ವಾಧೀನವಾದ ಜಮೀನಿಗೆ ಸಂಬಂಧಿಸಿದಂತೆ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಪೂರ್ಣ ಪ್ರಮಾಣದಲ್ಲಿ ಹೆಚ್ಚಿನ ಪರಿಹಾರವನ್ನು ಜಮಾ ಮಾಡಿದರೂ ಕೂಡ ವಕೀಲ ಕೆ.ಆರ್.ದೇಸಾಯಿಯವರು ನ್ಯಾಯಾಲಯದಿಂದ ವಿಶೇಷ ಭೂಸ್ವಾಧೀನಾಧಿಕಾರಿ, ನೌಕಾನೆಲೆ ಕಛೇರಿಗಾಗಲೀ ಅಥವಾ ಜಿಲ್ಲಾ ಸರ್ಕಾರಿ ವಕೀಲರಿಗೆ ಜಪ್ತಿಯ ಬಗ್ಗೆ ಯಾವುದೇ ರೀತಿಯ ಸೂಚನೆ ಅಥವಾ ಸಮನ್ಸ್ ನೀಡದೇ ಏಕಾಏಕಿ ಕಾರ್ಯಾಲಯಕ್ಕೆ ಬಂದು ಕಛೇರಿಯ ಚರಾಸ್ತಿಗಳನ್ನು ಜಪ್ತಿ ಮಾಡಿ ತೆಗೆದುಕೊಂಡು ಹೋಗಿದ್ದಾರೆ ಎಂದು ಸೀಬರ್ಡ್ ವಿಶೇಷ ಭೂಸ್ವಾಧೀನಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ ತಿಳಿಸಿದ್ದಾರೆ.

ಕರ್ನಾಟಕ ವಿದ್ಯುತ್ ಪ್ರಸರಣ/ ಹೆಸ್ಕಾಂ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ಸೆ.30ರಂದು ಮಧ್ಯಾಹ್ನ 12 ಗಂಟೆಗೆ ನಿಗದಿಪಡಿಸಿದಾಗಲೂ, ಪ್ರಕರಣದ ವಿಚಾರಣೆಯ ಪೂರ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ಯಾವುದೇ ಮುನ್ಸೂಚನೆ ನೀಡದೇ ಪ್ರಕರಣದಲ್ಲಿ ಪೂರ್ಣ ಪ್ರಮಾಣದಲ್ಲಿ ಹೆಚ್ಚಿನ ಪರಿಹಾರವನ್ನು ಜಮಾ ಮಾಡಿದರೂ ಕೂಡ ದೇಸಾಯಿಯವರು ಏಕಾಏಕಿ ನನ್ನ ಕಾರ್ಯಾಲಯಕ್ಕೆ ಬಂದು ಕಛೇರಿಯ ಚರಾಸ್ತಿಗಳನ್ನು ಜಪ್ತಿ ಮಾಡಲು ಪ್ರಯತ್ನಿಸಿದ್ದಾರೆ. ಈ ಎರಡೂ ಕಾರ್ಯಾಲಯದ ಜಪ್ತಿ ಮಾಡಿದ ಚರಾಸ್ತಿಗಳನ್ನು ಕಾನೂನಾತ್ಮಕವಾಗಿ ಜಪ್ತಿ ಮಾಡದಿರುವ ಕಾರಣ ಮರಳಿ ಕಾರ್ಯಾಲಯಕ್ಕೆ ಹಿಂದಿರುಗಿಸಿದ್ದಾರೆ ಎಂದು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top