ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ತೊಳಗೊಡು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಿಗೆ ಧಾತ್ರಿ ಪೌಂಡೇಶನ್ ಸಹಯೋಗದೊಂದಿಗೆ ಕ್ಯಾನ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಧಾತ್ರಿ ಫೌಂಡೇಶನ್ ಸಂಸ್ಥಾಪಕ ಶ್ರೀನಿವಾಸ್ ಭಟ್ಟ ಮಾತನಾಡಿ, ನಾನು ಮಾಡಿರುವುದು ಅಲ್ಪ ಸೇವೆ ನಮ್ಮಲ್ಲಿ ಇದ್ದಾಗ ದೇವರು ಕೊಟ್ಟಾಗ ನಮ್ಮಿಂದಾದ ಸೇವೆ ಮಾಡಬೇಕು ಯಾರ ಹೊಗಳಿಕೆಗೋ ಅಥವಾ ಯಾವುದೋ ಪ್ರತಿಫಲಾಪೇಕ್ಷೆಯಿಂದ ಸೇವೆ ಮಾಡಿದರೆ ಸೇವೆ ಏನಿಸುವದಲ್ಲ. ನಮ್ಮ ಶ್ರಮದ ಒಂದು ಭಾಗವನ್ನು ದಾನ ಧರ್ಮಕ್ಕಾಗಿ ದೇವರ ಭಾಗವಾಗಿ ತೆಗೆದಿಟ್ಟು ಉಳಿದ ಆದಾಯವನ್ನು ನಮ್ಮ ಜೀವನಕ್ಕೆ ಬಳಸಿಕೊಂಡಾಗ ಮಾತ್ರ ಸಾರ್ಥಕ ಬದುಕೆನಿಸುತ್ತದೆ ಎಂದರು. ದಾನ ನಮ್ಮ ಹಿರಿಯರು ನಮಗೆ ಹೇಳಿಕೊಟ್ಟ ಪಾಠ, ಅಲ್ಲದೇ ಇದು ಹಿಂದುತ್ವದ ಮೂಲ ತತ್ವವಾಗಿದೆ. ನಾವೆಲ್ಲರೂ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಸಮೀದವಾಗಿ ಅರ್ಪಿತರಾಗಬೇಕು. ಹಾಲು ಸಂಸ್ಕರಣಾ ಘಟಕದ ಕಾರ್ಯಕರ್ತರು ಗೋ ಸೇವಕರು, ಮುಂದಿನ ದಿನಗಳಲ್ಲಿ ಎಲ್ಲರೂ ಒಂದಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಾಘು ಭಟ್ಟ ಗಣೇಶ್ ಹೆಗಡೆ, ಹಾಗೂ ಊರ ಹಿರಿಯರು ಇದ್ದರು.