Slide
Slide
Slide
previous arrow
next arrow

6 ವರ್ಷಗಳ ಹಿಂದಿನ ಪ್ರಕಣದಲ್ಲಿ 13 ಮಂದಿ ಖುಲಾಸೆ .!

300x250 AD

ಕಾರವಾರ: ಉದ್ದೇಶಪೂರ್ವಕವಾಗಿ ಪೊಲೀಸರು ದೂರು ದಾಖಲಿಸಿ ನಗರದ 13 ಮಂದಿ ಮುಖಂಡರುಗಳನ್ನ ಕೋರ್ಟ್ಗೆ ಅಲೆದಾಡುವಂತೆ ಮಾಡಿದ್ದ 2016ರ ಪ್ರಕರಣವೊಂದರಲ್ಲಿ ಇಲ್ಲಿನ ಸಿವಿಲ್ ನ್ಯಾಯಾಲಯ ಆರೋಪಿಗಳನ್ನ ಖುಲಾಸೆ ಮಾಡಿದೆ.
2016ರಲ್ಲಿ ಬಿಜೆಪಿ ಮುಖಂಡ ವಿವೇಕಾನಂದ ಬೈಕೇರಿಕರ್ ಎನ್ನುವವರ ಪುತ್ರನನ್ನ ಪ್ರಕರಣವೊಂದರಲ್ಲಿ ವಶಕ್ಕೆ ಪಡೆದಿದ್ದ ಪೊಲೀಸರು, ಆತನಿಗೆ ಹಿಗ್ಗಾಮುಗ್ಗ ಥಳಿಸಿ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದರು. ಈ ಘಟನೆಯನ್ನ ಖಂಡಿಸಿ ಪೊಲೀಸರ ವಿರುದ್ಧ ವಿವಿಧ ಸಂಘ- ಸಂಸ್ಥೆಗಳು ಹಾಗೂ ಸಾರ್ವಜನಿಕರು ನಗರದ ಮಿತ್ರ ಸಮಾಜದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಕೂಡ ಸಲ್ಲಿಸಿದ್ದರು.
ಈ ವೇಳೆ ಜಿಲ್ಲಾಧಿಕಾರಿ ಕಚೇರಿಯ ಎದುರು ಕೆಲ ಪ್ರಮುಖರು ಘಟನೆ ಖಂಡಿಸಿ ಮೈಕ್‌ನಲ್ಲಿ ಮಾತನಾಡಿದ್ದರು. ಆದರೆ ಮೈಕ್ ಬಳಕೆಗೆ ಅನುಮತಿ ಪಡೆದಿಲ್ಲವೆಂದು ಮೈಕ್‌ನಲ್ಲಿ ಮಾತನಾಡಿದ್ದ ವಿವೇಕಾನಂದ ಬೈಕೇರಿಕರ್, ರಾಘು ನಾಯ್ಕ, ದೀಪಕ್ ವೈಂಗಣಕರ್,ವಕೀಲರಾದ ಸಂಜಯ್ ಸಾಳುಂಕೆ,ಜನಾಶಕ್ತಿ ವೇದಿಕೆಯ ಅಧ್ಯಕ್ಷರಾದ ಮಾಧವ ನಾಯಕ,ವಕೀಲರಾದ ನಾಗರಾಜ ನಾಯಕ,ಮಾಜಿ ಶಾಸಕರಾದ ಗಂಗಾಧರ ಭಟ್, ಪೂರ್ಣಿಮಾ ಮಹೇಕರ್, ದೀಪಕ್ ಕುಡಾಳಕರ್, ರಾಜೇಶ್ ನಾಯ್ಕ, ನಾಗರಾಜ ಜೋಶಿ, ಆನಂದ್ ರಾಯ್ಕರ್, ಮನೋಜ್ ಮೆಹ್ತಾರ ಮೇಲೆ ಪ್ರತಿಭಟನೆಯ ಬಳಿಕ ನಗರ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 37, 109, ಐಪಿಸಿ ಸೆಕ್ಷನ್ 143, 147, 149 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರತಿಭಟನಾ ಮೆರವಣಿಗೆಗೂ ಮುನ್ನ ಮೈಕ್‌ಗೆ ಅನುಮತಿ ಕೋರಿ ಹಣ ಪಾವತಿಸಿ, ಚಲನ್ ಕೂಡ ತುಂಬಲಾಗಿತ್ತು. ಅಲ್ಲದೇ ಪ್ರತಿಭಟನಾ ಮೆರವಣಿಗೆಗೆ ಪೊಲೀಸರೇ ಬಂದೋಬಸ್ತ್ ನೀಡಲು ಅವರೂ ಪಾಲ್ಗೊಂಡಿದ್ದರು. ಆದರೆ ಬಳಿಕ ಉದ್ದೇಶಪೂರ್ವಕವಾಗಿ 13 ಮಂದಿಯ ಮೇಲೆ ಪೊಲೀಸ್ ದೂರು ದಾಖಲಾಗಿತ್ತು. ಈ ಬಗ್ಗೆ ವಕೀಲ ನಾಗರಾಜ ನಾಯಕ ಮತ್ತು ಅವರ ತಂಡದ ಕಿರಿಯ ವಕೀಲರಾದ ದರ್ಶನ್ ಗೌಡ ಹಾಗೂ ಸ್ವಪ್ನಾ ಗುನಗಿ ಕೋರ್ಟ್ನಲ್ಲಿ ಸಮರ್ಥ ವಾದ ಮಂಡಿಸಿದ್ದು, 13 ಮಂದಿಯನ್ನೂ ಪ್ರಕರಣದಿಂದ ಖುಲಾಸೆಗೊಳಿಸಿ ಕೋರ್ಟ್ ಆದೇಶಿಸಿದೆ.

300x250 AD
Share This
300x250 AD
300x250 AD
300x250 AD
Back to top