Slide
Slide
Slide
previous arrow
next arrow

ಗೊಬ್ಬರದ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು..!

300x250 AD

ಅಂಕೋಲಾ: ಗೊಬ್ಬರದ ಗುಂಡಿಗೆ ಬಿದ್ದು ಎರಡುವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಾಲೂಕಿನ ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ

ಸಾಧ್ವಿ ಶ್ರೀಕಾಂತ ಹೆಬ್ಬಾರ್ (2 ವರ್ಷ 3 ತಿಂಗಳು) ಸಾವನಪ್ಪಿದ ಮಗುವಾಗಿದ್ದಾಳೆ. ಈಕೆ ಹಳವಳ್ಳಿ ಗ್ರಾಮದ ಶ್ರೀಕಾಂತ ಹೆಬ್ಬಾರ್ ಮತ್ತು ರೂಪಾ ದಂಪತಿಯ ದ್ವೀತಿಯ ಪುತ್ರಿಯಾಗಿದ್ದಳು‌.

ನಿನ್ನೆ ಬೆಳಿಗ್ಗೆ ಎಂದಿನಂತೆ ಸಾದ್ವಿ ಅಪ್ಪನೊಂದಿಗೆ ದನದ ಕೊಟ್ಟಿಗೆ ಬಳಿ ಕೆಲಸದಲ್ಲಿ ಮಗ್ನರಾಗಿದ್ದರು. ಹೀಗಾಗಿ ಮಕ್ಕಳ ಚಲನವಲನ ಗಮನಿಸಿರಲಿಲ್ಲ, ಕೆಲ ಸಮಯದ ನಂತರದ ಮಗಳ ಸದ್ದು ಕೇಳಿಸದೇ ಇದ್ದುದರಿಂದ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಮಗು ಸಾದ್ವಿ ಗೊಬ್ಬರದ ಗುಂಡಿಯಲ್ಲಿ ಬಿದ್ದಿರುವುದು ಕಂಡುಬಂದಿದೆ‌.

300x250 AD

ತಕ್ಷಣ ಗುಂಡಿಯಿಂದ ಮಗುವನ್ನು ಮೇಲಕ್ಕೆತ್ತಿ ತಾಲೂಕಾಸ್ಪತ್ರೆ ಕರೆತಂದಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಮಗು ಸಾವನ್ನಪ್ಪಿರುವ ಬಗ್ಗೆ ದೃಢಪಡಿಸಿದ್ದಾರೆ. ಪುಟ್ಟ ಕಂದಮ್ಮನ ಸಾವಿನಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಅಂಕೋಲಾ ಪೋಲಿಸರು‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Share This
300x250 AD
300x250 AD
300x250 AD
Back to top