Slide
Slide
Slide
previous arrow
next arrow

ಮನುವಿಕಾಸದ ಸುಸ್ಥಿರ ಕೃಷಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಯೋಜನೆಗಳ ಉದ್ಘಾಟನೆ

300x250 AD

ಶಿರಸಿ: ಮನುವಿಕಾಸ ಸ್ಯಯಂ ಸೇವಾ ಸಂಸ್ಥೆಯು ಸಿ.ಎಮ್.ಎಸ್ ಫೌಂಡೇಶನ್ನಿನ ಸಹಯೋಗದೊಂದಿಗೆ ಬನವಾಸಿ ಭಾಗದ ಆಯ್ದ ಗ್ರಾಮಗಳಲ್ಲಿ ಗ್ರಾಮೀಣ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ ಶಿಕ್ಷಣ, ಸುಸ್ಥಿರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ಘಾಟನಾ ಕಾರ್ಯಕ್ರಮವನ್ನು ಏ.5 ರಂದು ಬನವಾಸಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಯೋಜಿಸಿತ್ತು.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ತಾಲೂಕು ಪಂಚಾಯತಿಯ ಸಹಾಯಕ ನಿರ್ದೆಶಕರಾದ ಚನ್ನಬಸಪ್ಪ ಹಾವಣಗಿ ಮಾತನಾಡಿ ಮನುವಿಕಾಸ ಸಂಸ್ಥೆಯು ನೆಲೆ ಜಲ ಸಂರಕ್ಷಣೆ, ಗ್ರಾಮೀಣ ಅಭಿವೃದ್ಧಿಗೆ ಪೂರಕವಾದ ಕಾರ್ಯಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಇದರಿಂದಾಗಿ ತಳಮಟ್ಟದ ಜನಸಮುದಾಯಕ್ಕೆ ಸಿಗಬೇಕಾದ ಅದೆಷ್ಟೋ ಯೋಜನೆಗಳು ಸಿಕ್ಕಿವೆ ಎಂದರು. ಅಂತರ್ಜಲ ಸಂರಕ್ಷಣೆ, ಸುಸ್ಥಿರ ಕೃಷಿಯ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದು ಸಮಾಜದ ಸರ್ವಾಂಗೀಣ ಅಭಿವೃದ್ದಿಯ ಸಂಕೇತವಾಗಿದೆ ಎಂದರು.

ಮನುವಿಕಾಸ ಸಂಸ್ಥೆಯ ನಿರ್ದೆಶಕರಾದ ಗಣಪತಿ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ ಮನುವಿಕಾಸ ಸಂಸ್ಥೆಯ ಕಾರ್ಯಯೋಜನೆಗಳ ಬಗೆಗೆ ವಿವರಿಸಿದರು. ಸಮಾಜದ ಹಿತ ದೃಷ್ಟಿಯಿಂದ ರೂಪಿತವಾದ ಒಂದು ಯೋಜನೆ ಯಶಸ್ವಿಯಾಗಲು ಆ ಯೋಜನೆಯೆ ಎಲ್ಲ ಭಾಗೀದಾರರು ಸಕ್ರಿಯವಾಗಿ ಅದರಲ್ಲಿ ತೊಡಗಿಕೊಂಡರೆ ಮಾತ್ರ ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಸಂಸ್ಥೆಯು ಎಲ್ಲ ಭಾಗೀದಾರರ ಸಕ್ರಿಯ ಸಹಕಾರವನ್ನು ಬಯಸುತ್ತದೆ. ಸದ್ಯ ಬನವಾಸಿ ಭಾಗದ ಆಯ್ದ 20 ಗ್ರಾಮಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದು ಗ್ರಾಮೀಣ ಮಹಿಳೆಯರು ಮತ್ತು ಬಡ ವರ್ಗಗಳ ಆರ್ಥಿಕ ಅಭಿವೃದ್ದಿ ಈ ಯೋಜನೆಗಳು ಒಳಗೊಂಡಿವೆ, ಮುಂಬರುವ ದಿನಗಳಲ್ಲಿ ಯೋಜನೆಯ ಯಶಸ್ಸಿನ ಆದಾರದ ಮೇಲೆ ಬೇರೆ ಗ್ರಾಮಗಳಿಗೂ ವಿಸ್ತರಿಸಲಾಗುವುದು ಎಂದರು.

300x250 AD

ಸಿಎಮ್‌ಎಸ್ ಇನ್ಫೊಸಿಸ್ಟಮ್ಸ್ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕರಾದ ಉಮೇಶ. ಎ.ಸಿ. ಮಾತನಾಡಿ ಜನಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಅವಲೋಕಿಸಿ ಅದಕ್ಕೆ ಪರಿಹಾರವನ್ನು ಕಲ್ಪಿಸುವ ಸಿಟ್ಟಿನಲ್ಲಿ ನಮ್ಮ ಸಂಸ್ಥೆ ಹಲವಾರು ಹೊಸರೀತಿಯ ಕಾರ್ಯಯೋಜನೆಯನ್ನು ರೂಪಿಸಿದೆ, ಜನರ ಸಕ್ರಿಯ ಭಾಗವಹಿಸುವಿಕೆಯ ಮೇಲೆ ಈ ಯೋಜನೆಗಳ ಯಶಸ್ಸು ನಿಂತಿರುವುದರಿಂದ ತಾವೆಲ್ಲರೂ ಇದನ್ನು ಯಶಸಿಗೊಳ್ಳಲು ಸಹಕರಿಸಬೇಕು ಎಂದರು ಮತ್ತು ಸಿಎಮ್‌ಎಸ್ ಸಂಸ್ಥೆಯಿಂದ ಲಭ್ಯವಿರುವ ಉದ್ಯೋಗಾವಕಶಗಳ ಬಗೆಗೆ ಮಾಹಿತಿ ನೀಡಿದರು.
ಬನವಾಸಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಹನುಮಂತ್ ಛಲವಾದಿ ಮಾತನಾಡಿ ಸಂಸ್ಥೆಯು ಬನವಾಸಿ ಬಾಗದ ಗ್ರಾಮಗಳಿಗೆ ನೀಡಿರುವ ಕೆರೆಗಳ ಪುನರುಜ್ಜೀವನ, ಸ್ವ- ಸಹಾಯ ಸಂಘಗಳ ನಿರ್ಮಾಣ ಮತ್ತು ಗ್ರಾಮೀಣ ಮಹಿಳೆಯರಿಗಾಗಿ ಕೌಶಲ್ಯ ಅಭಿವೃಧ್ದಿ ಕಾರ್ಯಗಳ ಕುರಿತು ಸಂಸ್ಥೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸಿಎಮ್‌ಎಸ್ ಇನ್ಫೊಸಿಸ್ಟಮ್ಸ್ ಲಿಮಿಟೆಡ್‌ನ ವಲಯ ವ್ಯವಸ್ಥಾಪಕರುಗಳಾದ ವೆಂಕಟೇಶ ಎನ್, ಉಮೇಶ್ ಟಿವಿ, ಗುಡ್ನಾಪುರ ಗ್ರಾಮ ಪಂಚಾಯ ಸದಸ್ಯರಾದ ಶ್ರೀಮತಿ ರಿಂದಾ ನಾಯ್ಕ್, ಮನುವಿಕಾಸ ಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ 100 ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು ಭಾಗವಹಿಸಿದ್ದರು. ಮನುವಿಕಾಸ ಸಂಸ್ಥೆಯ ಯೋಜನಾ ಉಪ ನಿರ್ದೆಶಕರಾದ ಅಶ್ವತ್ಥ ನಾಯ್ಕ್ ಕಾರ್ಯಕ್ರಮ ನೀರೂಪಿಸಿದರು. ಕ್ಷೇತ್ರ ಸಂಯೋಜಕರಾದ ಶ್ರೀಮತಿ ಭವಾನಿ ನಾಯ್ಕ್ ವಂದಿಸಿದರು.

Share This
300x250 AD
300x250 AD
300x250 AD
Back to top