ಶಿರಸಿ: ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಬಿವೃದ್ಧಿ ಸಂಸ್ಥೆ,(ರಿ) ಭೈರುಂಬೆ, ಗೆಳಯರ ಬಳಗ ಭೈರುಂಬೆ(ರಿ) ಇವರ ಸಂಯುಕ್ತ ಆಶ್ರಯದಲ್ಲಿ ಹುಳಗೋಳ ಕೃಷಿ ಪತ್ತಿನ ಸಹಕಾರ ಸಂಘ, ಭೈರುಂಭೆಯ ಸಹಕಾರದೊಂದಿಗೆ ಒಡ್ಡೋಲಗ ರಂಗ ಪರ್ಯಟನ ಹಿತ್ಲಕೈ ಸಿದ್ದಾಪುರ (ಉ.ಕ.) ಇವರ ಅರ್ಪಿಸುವ ನಾಟಕ ‘ಬಹುಮುಖಿ’ ಮಾ.23, ರವಿವಾರ ಸಂಜೆ 6.30ರಿಂದ ಹುಳಗೋಳ ಕೃಷಿ ಪತ್ತಿನ ಸಹಕಾರ ಸಂಘ ಭೈರುಂಭೆಯ ಸಭಾಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ವಿವೇಕ ಶಾನಭಾಗ ರಚಿಸಿದ್ದು, ವಿನ್ಯಾಸ ನಿರ್ದೇಶನ ಗಣಪತಿ ಬಿ. ಹಿತ್ಲಕೈ ಮಾಡಿರುತ್ತದೆ. ಕಲಾಸಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲೆಗೆ ಪ್ರೋತ್ಸಾಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಂಘಟಕರು ವಿನಂತಿಸಿರುತ್ತಾರೆ.
ಮಾ.23ಕ್ಕೆ ಭೈರುಂಭೆಯಲ್ಲಿ ‘ಬಹುಮುಖಿ’ ನಾಟಕ
