ದಾಂಡೇಲಿ : ಇದೇ ಫೆ. 28ರಂದು ತಾಲೂಕಿನ ಆಲೂರಿನಲ್ಲಿ ನಡೆಯಲಿರುವ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವರೂ ಸಹಕರಿಸುವಂತೆ ತಹಶೀಲ್ದಾರ್ ಶೇಲೇಶ ಪರಮಾನಂದ ಮನವಿಯನ್ನು ಮಾಡಿದ್ದಾರೆ.
ಅವರು ಗುರುವಾರ ನಗರದ ಅಂಬೇವಾಡಿಯಲ್ಲಿರುವ ತಾಲ್ಲೂಕು ಆಡಳಿತ ಸೌಧದಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ, ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತಂತೆ ಈಗಾಗಲೇ ಪೂರ್ವಭಾವಿ ಸಭೆಯನ್ನು ಮಾಡಲಾಗಿದೆ. ಸಮ್ಮೇಳನದ ಲಾಂಛನವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಸಮ್ಮೇಳನದ ಯಶಸ್ಸಿಗೆ ಎಲ್ಲ ಇಲಾಖೆಗಳು ಕೈ ಜೋಡಿಸುವಂತೆಯೂ ಹಾಗೂ ಸಮಸ್ತ ಕನ್ನಡಾಭಿಮಾನಿಗಳು ಸಹಕರಿಸುವಂತೆಯೂ ವಿನಂತಿಸಿದರು.