Slide
Slide
Slide
previous arrow
next arrow

ಜ.27ಕ್ಕೆ ದಿನದರ್ಶಿಕೆ ಬಿಡುಗಡೆ: ವಿಶೇಷ ಉಪನ್ಯಾಸ ಕಾರ್ಯಕ್ರಮ

300x250 AD

ಶಿರಸಿ: ಜ.27, ಸೋಮವಾರದಂದು ನಗರದ ನೆಮ್ಮದಿ ಆವರಣದ ರಂಗಧಾಮದಲ್ಲಿ ಇಳಿಹೊತ್ತು 4 ಗಂಟೆಗೆ ಕನ್ನಡದ ಆದ್ಯ ನಾಟಕಕಾರ ಹಾಗೂ ಕೀರ್ತನಕಾರ ಸಕ್ಕರಿ ಬಾಳಾಚಾರ್ಯ(ಶಾಂತಕವಿ) ರವರ 169 ನೇ ಜನ್ಮದಿನೋತ್ಸವದ ಅಂಗವಾಗಿ 2025 ರ ದಿನದರ್ಶಿಕೆ ಬಿಡುಗಡೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಶಿರಸಿ ತಾಲ್ಲೂಕು ಘಟಕ ಉತ್ತರ ಕನ್ನಡ ಜಿಲ್ಲೆ ಮತ್ತು ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ (ರಿ) ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ, ಚಿಂತಕರಾದ ಪ್ರೊ.ಎಚ್.ಆರ್. ಅಮರನಾಥ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಚಾರ್ಯರಾದ ವಿದ್ಯಾವಾಚಸ್ಪತಿ ವಿ|| ಉಮಾಕಾಂತ ಭಟ್ಟ, ಕೆರೆಕೈ ಆಗಮಿಸಲಿದ್ದು ಶಾಂತಕವಿಗಳು 1885 ರಲ್ಲಿ ಅನುವಾದಿಸಿದ ‘ವಿರಹ ತರಂಗ’ (ಜಯದೇವನ ‘ಗೀತಗೋವಿಂದ’)ದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

300x250 AD

ಧಾರವಾಡದ ರಂಗನಿರ್ದೇಶಕರಾದ ಡಾ.ಪ್ರಕಾಶ ಗರುಡ ಅವರು ದಿನದರ್ಶಿಕೆ ಬಿಡುಗಡೆ ಮಾಡಿ ಶಾಂತಕವಿಗಳ ಕಿರುಪರಿಚಯವನ್ನು ಮಾಡಲಿದ್ದಾರೆ. ಸಂಸ್ಕೃತಿ ಚಿಂತಕರಾದ ವಿ.ಪಿ.ಹೆಗಡೆ.ವೈಶಾಲಿ, 
ಜಾನಪದ ಪರಿಷತ್ತಿನ ತಾಲ್ಲೂಕಾಧ್ಯಕ್ಷರಾದ ಕೃಷ್ಣ ಪದಕಿ ಮತ್ತು ಧಾರವಾಡದ ಹಿರಿಯ ರಂಗಕರ್ಮಿ ಡಾ.ಶಶಿಧರ ನರೇಂದ್ರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮವನ್ನು ಪರಿಷತ್ ಸದಸ್ಯೆ ದಾಕ್ಷಾಯಿಣಿ ಪಿ.ಸಿ.ನಿರೂಪಿಸಲಿದ್ದಾರೆ ಎಂದು ಪರಿಷತ್ತಿನ ತಾಲ್ಲೂಕಾಧ್ಯಕ್ಷ ಕೃಷ್ಣ ಪದಕಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Share This
300x250 AD
300x250 AD
300x250 AD
Back to top