ಭಟ್ಕಳ:ಭಾರತದ ಆಧ್ಯಾತ್ಮಿಕತೆಯ ಮೇರು ಪರ್ವತ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ಸ್ವಾಮಿ ವಿವೇಕಾನಂದ ಜನಸ್ಪಂದನ( ರೀ.) ಜಾಲಿ. ಭಟ್ಕಳ ವತಿಯಿಂದ ಅಂಚೆ ಇಲಾಖೆಯ ಸಹಯೋಗದಲ್ಲಿ “ವಿವೇಕ ಸಂಜೀವಿನಿ” ಬೃಹತ್ ಅಂಚೆ ಅಪಘಾತ ವಿಮೆ ಹಾಗೂ ಜೀವ ವಿಮೆ ಹಾಗೂ ಅಂಚೆ ಉಳಿತಾಯ ಯೋಜನೆಗಳ ನೋಂದಣಿ ಶಿಬಿರ ಕಾರ್ಯಮವನ್ನು ಇಲ್ಲಿನ ಜಾಲಿ ನಾಮಧಾರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಜಾಲಿಯ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಾಹಕ ಶಾಂತಾರಾಮ ಎಸ್.ನಾಯ್ಕ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ನಾರಾಯಣಿ ಎಸ್ ನಾಯ್ಕ,
ಗೌರವ ಉಪಸ್ಥಿತಿ ಅಂಚೆ ಅಧೀಕ್ಷಕ ಧನಂಜಯ ಆಚಾರ ಇದ್ದರು. ಇವರಿಗೆ ನೆನಪಿನ ಕಾಣಿಕೆಯಾಗಿ ಭಗವದ್ಗೀತಾ ಪುಸ್ತಕವನ್ನು ನೀಡಲಾಯಿತು.
150 ಕ್ಕೂ ಅಧಿಕ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಂಡರು. ಗ್ರಾಮದಲ್ಲಿ ಕಡು ಬಡತನ ಇರುವ 20 ಕ್ಕೂ ಹೆಚ್ಚು ಜನರಿಗೆ ಸಂಸ್ಥೆಯಿಂದಲೇ ಹಣ ಭರಿಸಿ ವಿಮೆ ಮಾಡಿಸಲಾಯಿತು ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಜನಸ್ಪಂದನ( ರೀ.) ಜಾಲಿ ಅಧ್ಯಕ್ಷರಾದ ವಸಂತ ನಾಯ್ಕ, ಸದಸ್ಯರಾದ ತಿಮ್ಮಪ್ಪ ನಾಯ್ಕ,ಶ್ರೀಧರ ಖಾರ್ವಿ,ದೇವೇಂದ್ರ ಗೊಂಡ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿಯಾದ ಮಾರುತಿ ನಾಯ್ಕ ಜಾಲಿ ಕೋಡಿ ನಿರೂಪಿಸಿದರು.