ಶಿರಸಿ: ಸಾಹಿತ್ಯ ಸಂಚಲನ ಶಿರಸಿ(ಉ.ಕ), ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಶಿರಸಿ, ಜಿಲ್ಲಾ ಉತ್ತರ ಕನ್ನಡ ಮತ್ತು ನೆಮ್ಮದಿ ಓದುಗರ ಬಳಗ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಜ.14, ಮಂಗಳವಾರ, ಅಪರಾಹ್ನ 3:30 ಘಂಟೆಗೆ ನೆಮ್ಮದಿ ಕುಟೀರದಲ್ಲಿ ತಿಂಗಳ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ ಕೃತಿಗಳ ಅವಲೋಕನ ಮತ್ತು ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಥೆಗಾರ ಕೆ.ಮಹೇಶ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಗಜಲ್ ಕವಿ ಹಾಗೂ ಶಿರಸಿ ಸಮಾಚಾರ ಸಂಪಾದಕರಾದ ಜಿ.ಸುಬ್ರಾಯ ಭಟ್ಟ ಬಕ್ಕಳ ಭಾಗವಹಿಸಲಿದ್ದಾರೆ.
ಈ ಬಾರಿ ಕೃತಿಗಳ ಅವಲೋಕನದಲ್ಲಿ ಕೃಷ್ಣ ಪದಕಿ ಅವರ ‘ಭರವಸೆಯ ಬೆಳಕು’ ಕವನ ಸಂಕಲನವನ್ನು ಕವಯಿತ್ರಿ ಮಂಗಳಗೌರಿ ಭಟ್ಟ ಅವಲೋಕಿಸಲಿದ್ದು, ಮಹೇಶ ಹೆಗಡೆ ಹಳ್ಳಿಗದ್ದೆ ಅವರ ‘ಮಹಿ ಗಜ಼ಲ್’ ಕೃತಿಯನ್ನು ಕವಯಿತ್ರಿ ರೋಹಿಣಿ ಹೆಗಡೆ ಅವರು ಅವಲೋಕಿಸಲಿದ್ದಾರೆ. ತದನಂತರ ಸಂಕ್ರಾಂತಿ ಸಂಭ್ರಮ ಕವಿಗೋಷ್ಠಿ ನೆರವೇರಲಿದೆ. ಗೋಷ್ಠಿಯಲ್ಲಿ ಭಾಗವಹಿಸುವವರು ತಮ್ಮ ಸ್ವರಚಿತ ಕವನದೊಂದಿಗೆ ಉಪಸ್ಥಿತರಾಗಬೇಕೆಂದು ಕಾರ್ಯಕ್ರಮದ ಆಯೋಜಕರಾದ ನೆಮ್ಮದಿ ಓದುಗರ ಬಳಗದ ವಿ.ಪಿ.ಹೆಗಡೆ ವೈಶಾಲಿ, ಸಾಹಿತ್ಯ ಸಂಚಲನ, ಶಿರಸಿ(ಉ.ಕ.) ಮತ್ತು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಶಿರಸಿ ಪರವಾಗಿ ಕೃಷ್ಣ ಪದಕಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.