Slide
Slide
Slide
previous arrow
next arrow

ರಸ್ತೆ ಸುಧಾರಣಾ ಕಾಮಗಾರಿಗೆ ಶಾಸಕ ಆರ್.ವಿ.ಡಿ.ಯಿಂದ ಶಿಲಾನ್ಯಾಸ

300x250 AD

ದಾಂಡೇಲಿ : ಕರ್ನಾಟಕ ಸರಕಾರ, ಲೋಕೋಪಯೋಗಿ ಇಲಾಖೆಯ ಆಶ್ರಯದಡಿ ದಾಂಡೇಲಿ ತಾಲೂಕಿನ ಮುಂಡಗೋಡ – ಅಣಶಿ ರಾಜ್ಯ ಹೆದ್ದಾರಿಯ ಕಿತ್ತೂರು ಚೆನ್ನಮ್ಮ ವೃತ್ತದಿಂದ ದಾಂಡೇಲಿ ತಾಲೂಕು ಗಡಿಯವರೆಗೆ ಮತ್ತು ತಾವರಗಟ್ಟಿ – ದಾಂಡೇಲಿ ರಸ್ತೆಯ ಗೋಬ್ರಾಳದಿಂದ ಅಂಬೇವಾಡಿ ಕೆಇಬಿ ಗ್ರೀಡ್ ವರೆಗೆ ರಸ್ತೆ ಸುಧಾರಣೆ ಕಾಮಗಾರಿಯ ಶಿಲಾನ್ಯಾಸ ಸಮಾರಂಭವು ಶುಕ್ರವಾರ ನಗರದ ಕೆ.ಸಿ ವೃತ್ತದ ಹತ್ತಿರ ಜರುಗಿತು.

ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದ ಶಾಸಕರಾದ ಆರ್.ವಿ‌.ದೇಶಪಾಂಡೆ ಕ್ಷೇತ್ರದ ರಸ್ತೆಗಳ ಸುಧಾರಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ. ಬಹು ಮುಖ್ಯವಾಗಿ ದಾಂಡೇಲಿ ನಗರವನ್ನು ಹಾದು ಹೋಗುವ ದಾಂಡೇಲಿ – ಅಣಶಿ ರಸ್ತೆಯ ಕೆ.ಸಿ.ವೃತ್ತದಿಂದ ದಾಂಡೇಲಿ ತಾಲೂಕಿನ ಗಡಿಯವರೆಗೆ ರೂ. 3 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣಾ ಕಾಮಗಾರಿ ಮತ್ತು ಗೋಬ್ರಾಳದಿಂದ ಅಂಬೇವಾಡಿಯವರೆಗೆ ರೂ.2 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣಾ ಕಾಮಗಾರಿ ನಡೆಯಲಿದೆ. ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಕ್ಷೇತ್ರಕ್ಕೆ ಬೇಕಾಗುವ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಯಾದ ನನ್ನ ಆದ್ಯ ಕರ್ತವ್ಯವು ಆಗಿದೆ. ಈ ಎರಡು ಕಾಮಗಾರಿಗಳು ಗುಣಮಟ್ಟದಿಂದ ನಡೆಯಬೇಕು. ಕಾಮಗಾರಿಯ ಗುಣಮಟ್ಟದ ಬಗ್ಗೆ ಲೋಕೋಪಯೋಗಿ ಇಲಾಖೆ ಕಾಲ ಕಾಲಕ್ಕೆ ಪರಿಶೀಲನೆಯನ್ನು ನಡೆಸಬೇಕೆಂದು ಲೋಕಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನತೆಯ ನಂಬಿಕೆಯನ್ನು ಉಳಿಸುವ ಕೆಲಸದ ಜೊತೆಗೆ ಬಡವರ ಆರ್ಥಿಕತೆಗೆ ಶಕ್ತಿ ತುಂಬುವ ಕೆಲಸವನ್ನು ಬದ್ಧತೆಯಿಂದ ಮಾಡುತ್ತಾ ಬಂದಿದೆ ಎಂದರು.

300x250 AD

ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ರಾಮಲಿಂಗ ಜಾಧವ, ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ಲೋಕಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್.ಪಿ.ಕಟ್ಟಿಮನಿ, ಸಹಾಯಕ ಅಭಿಯಂತರ ಸಂತೋಷ್ ವಿ.ಅಥಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ ಹಲವಾಯಿ ಹಾಗೂ ಮುಖಂಡರು ಮತ್ತು ನಗರಸಭೆಯ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಹಾಗೂ ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top