ಅಂಕೋಲಾ: ತಾಲೂಕಿನ ಗಡಿಗ್ರಾಮವಾದ ಹಳವಳ್ಳಿಯ ವಿಶ್ವೇಶ್ವರ ಮಹಾಬಲೇಶ್ವರ ಹೆಗಡೆ ವಯೋಸಹಜವಾಗಿ ತಮ್ಮ 101 ನೇ ವರ್ಷದಲ್ಲಿ ನಿಧನ ಹೊಂದಿದರು.
ಇವರು 50 ವರ್ಷಗಳ ಕಾಲ ಹಳವಳ್ಳಿ ಮೇಳದಲ್ಲಿ ಭಾಗವತರಾಗಿ ಯಕ್ಷಗಾನವನ್ನು ಮುಂದಿನ ತಲೆಮಾರಿನವರು ಮುಂದುವರೆಸುವ ಸಲುವಾಗಿ ಯಕ್ಷಗಾನ ತರಬೇತಿ ,ಹಾಗೂ ಹಳವಳ್ಳಿ ಮೇಳದ ಯಜಮಾನರಾಗಿ ಅನೇಕ ಕಡೆ ಯಕ್ಷಗಾನ ಪ್ರದರ್ಶನ ಮಾಡಿಸಿದ್ದರು. ಇವರ ನಿಧನಕ್ಕೆ ಊರವರು ,ಇವರ ಯಕ್ಷಗಾನ ಶಿಷ್ಯಬಳಗ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಂಕೋಲಾ ಹವ್ಯಕ ಸಾಂಸ್ಕೃತಿಕ ಸಂಘವು ಈ ವರ್ಷ ಯಕ್ಷ ಸೌರಭ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಆ ಸಂದರ್ಭದಲ್ಲಿ ಒಂದು ಯಕ್ಷ ಪದ್ಯವನ್ನು ಹೇಳಿ ,ನೆರೆದ ಜನರನ್ನು ರಂಜಿಸಿದ್ದು ಗಮನಾರ್ಹ. ಶತಾಯುಷಿ ವಿಶ್ವೇಶ್ವರ ಹೆಗಡೆಯವರು ಇಬ್ಬರು ಪುತ್ರರು, ನಾಲ್ಕು ಜನ ಪುತ್ರಿಯರು ಮೊಮ್ಮಕ್ಕಳು, ಬಂಧು ಬಳಗವನ್ನು ಅಗಲಿದ್ದಾರೆ.